ಅಥಣಿ(ಬೆಳಗಾವಿ): ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲ್ಲೂಕಿನ ಯಲ್ಲಮ್ಮನವಾಡಿಯ ಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ಪಕ್ಕದಲ್ಲೇ ಇರುವ ಯಲ್ಲಮ್ಮ ದೇವಿ ದೇವಸ್ಥಾನ ಮುಳುಗಡೆಯಾಗಿದೆ.
ಶ್ರಾವಣ ಮಾಸದಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ನಿತ್ಯ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ, ದೇವಸ್ಥಾನದಲ್ಲಿ ಯಲ್ಲಮ್ಮ ದೇವಿ ಮೂಲ ವಿಗ್ರಹ ಅರ್ಧದಷ್ಟು ಮುಳುಗಿದ್ದರಿಂದ ದೂರದಲ್ಲಿ ನಿಂತುಕೊಂಡೇ ದೇವಿ ದರ್ಶನ ಪಡೆಯುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಹಳ್ಳದ ನೀರು ನುಗ್ಗಿ ಈ ದೇವಸ್ಥಾನ ಮುಳುಗಿತ್ತು. ಅದಾದ ನಂತರ ಇದೇವರ್ಷ ಮುಳುಗಡೆಯಾಗಿದೆ.
‘ದೇವಸ್ಥಾನಕ್ಕೆ ನೀರು ನುಗ್ಗಿದೆ. ಆದರೂ, ನೀರಿನಲ್ಲೇ ಹೋಗಿ ದೇವಿಗೆ ಪೂಜೆ ನೆರವೇರಿಸುತ್ತಿದ್ದೇವೆ. ಶ್ರಾವಣ ಮಾಸದ ಪ್ರಯುಕ್ತ ಪಂಚಾಮೃತ ಅಭಿಷೇಕ ಮಾಡುತ್ತಿದ್ದೇವೆ’ ಎಂದು ದೇವಸ್ಥಾನದ ಅರ್ಚಕ ರಾಹುಲ ಪೂಜಾರಿ ತಿಳಿಸಿದರು.
ಯಲ್ಲಮ್ಮ ದೇವಿ ದೇವಸ್ಥಾನ
ಯಲ್ಲಮ್ಮ ದೇವಿ ದೇವಸ್ಥಾನ
ತಾಲ್ಲೂಕಿನಲ್ಲಿ ಶನಿವಾರ ಸಂಜೆಯಿಂದ ತಡರಾತ್ರಿವರೆಗೆ ಸುರಿದ ಧಾರಾಕಾರ ಮಳೆಗೆ ತುಮಕೂರು ರಸ್ತೆ ಪಕ್ಕದ ಸ್ಮಶಾನ ಮುಳುಗಡೆಯಾಗಿದೆ.
ರೈಲ್ವೆ ಮೇಲ್ಸೇತುವೆ ಕೆಳಗೆ ಮೂರ್ನಾಲ್ಕು ಅಡಿ ನೀರಿನಲ್ಲಿ ಕಾರು ಮುಳುಗಿದೆ. ಕೋಟೆ ಬಳಿ ಬನ್ನಿಮರ ರಸ್ತೆಗೆ ಉರುಳಿ ಸಂಚಾರಕ್ಕೆ ಅಡಚಣೆಯಾಯಿತು. ಇಡಗೂರಿನಲ್ಲಿ 13 ಸೆಂ. ಮೀ ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.