
ಪ್ರಜಾವಾಣಿ ವಾರ್ತೆಬೆಳಗಾವಿ: ಇಲ್ಲಿನ ‘ರೋಸ್ಟ್ರಮ್ ಡೈರೀಸ್’ ತಂಡದಿಂದ ನ್ಯಾನೊ ಕಥೆಗಳ ಕಾರ್ಯಕ್ರಮದಲ್ಲಿ ‘ಕಾವ್ಯ ಡಿಂಡಿಮ’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
‘ಪ್ರತಿ ತಿಂಗಳು ಒಂದೊಂದು ವಿಷಯದ ಕುರಿತು ಸ್ಪರ್ಧೆ ನಡೆಸಲಾಗುತ್ತದೆ. ಯುವ ಲೇಖಕರನ್ನು ಉತ್ತೇಜಿಸಿ ಅವರ ಕಲೆಗೊಂದು ವೇದಿಕೆಯನ್ನು ಕೊಡುವ ಆಶಯ ಈ ಹೊಂದಲಾಗಿದೆ. ‘ಜೀವನ ಚಕ್ರ’ ವಿಷಯದ ಕುರಿತು ಸ್ವರಚಿತ ಕವನಗಳನ್ನು ಮಾರ್ಚ್ 31ರ ಒಳಗೆ ಕಳುಹಿಸಬಹುದು. ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಉಡುಗೊರೆಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ www.nanokathegalu.com/kd ಜಾಲತಾಣಕ್ಕೆ ಭೇಟಿ ನೀಡಬಹುದು’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.