ADVERTISEMENT

ತಾರತಮ್ಯವಿಲ್ಲದೆ ಅಡುಗೆ ಅನಿಲ ಸಿಲಿಂಡರ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:07 IST
Last Updated 17 ಜನವರಿ 2022, 15:07 IST
ದಡ್ಡಿ ಗ್ರಾಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಈಚೆಗೆ ವಿತರಿಸಿದರು
ದಡ್ಡಿ ಗ್ರಾಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಈಚೆಗೆ ವಿತರಿಸಿದರು   

ಹೆಬ್ಬಾಳ: ‘ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಯಾರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಯಮಕನಮರಡಿ ಮತ ಕ್ಷೇತ್ರದ ವ್ಯಾಪ್ತಿಯ ಮಸರಗುಪ್ಪಿಯಲ್ಲಿ 58, ಕುರಣಿಯಲ್ಲಿ 58, ಅರ್ಜುನವಾಡದಲ್ಲಿ 60, ಪಾಶ್ಚಾಪೂರದಲ್ಲಿ 150, ದಡ್ಡಿ ಗ್ರಾಮದಲ್ಲಿ 120 ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಈಚೆಗೆ ವಿತರಿಸಿ ಅವರು ಮಾತನಾಡಿದರು.

‘ಯೋಜನೆಯಲ್ಲಿ ದೇಶದಾದ್ಯಂತ 8 ಕೋಟಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ 2 ಕೋಟಿ ಸಿಲಿಂಡರ್‌ ವಿತರಿಸುವ ಗುರಿ ಸರ್ಕಾರದ್ದಾಗಿದೆ. ಜನಪರ ಯೋಜನೆಗಳು ನೇರವಾಗಿ ತಲುಪುತ್ತಿವೆ. ತಾರತಮ್ಯ ಮಾಡುತ್ತಿಲ್ಲ. ಇದರಿಂದ ಬಡ ಜನರಿಗೆ ಅನುಕೂಲವಾಗಿದೆ’ ಎಂದರು.

ADVERTISEMENT

ವಿದ್ಯಾನಂದ ಶ್ರೀ, ಮುಖಂಡರಾದ ಶಶಿಕಾಂತ ನಾಯಿಕ, ರವಿಂದ್ರ ಹಂಜಿ, ಮಾರುತಿ ಅಷ್ಠಗಿ, ಪಕ್ಷದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಶ್ರೀಶೈಲ ಯಮಕನಮರಡಿ, ಶಂಕರರಾವ ಬಾಂದುರ್ಗೆ, ಅಶೋಕ ಚಂದಪ್ಪಗೋಳ, ಅಮರ ಮಹಾಜನಶೆಟ್ಟಿ, ಬಸವರಾಜ ಅಂಬಿಗೇರ, ಬಸವರಾಜ ಹುಂದ್ರಿ, ಬಸವರಾಜ ಉದೋಶಿ, ಕಲಗೌಡಾ ಪಾಟೀಲ, ದಡ್ಡಿ ಗ್ರಾ.ಪಂ. ಅಧ್ಯಕ್ಷ ಮುನ್ನಾ ಶೇಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.