ADVERTISEMENT

ಬೆಳಗಾವಿ| ‘ಕುರಾನ್‌ ದಹನ: ಹಿಂದೂಗಳನ್ನಷ್ಟೇ ಗುರಿ ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:41 IST
Last Updated 21 ಮೇ 2025, 13:41 IST
ಕುರಾನ್‌ ಸುಟ್ಟ ಪ್ರಕರಣದಲ್ಲಿ ಹಿಂದೂಗಳನ್ನಷ್ಟೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂತಿ ಬಸ್ತವಾಡ ಗ್ರಾಮಸ್ಥರು ಬೆಳಗಾವಿಯಲ್ಲಿ  ಬುಧವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ
ಕುರಾನ್‌ ಸುಟ್ಟ ಪ್ರಕರಣದಲ್ಲಿ ಹಿಂದೂಗಳನ್ನಷ್ಟೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂತಿ ಬಸ್ತವಾಡ ಗ್ರಾಮಸ್ಥರು ಬೆಳಗಾವಿಯಲ್ಲಿ  ಬುಧವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ   

ಬೆಳಗಾವಿ: ತಾಲ್ಲೂಕಿನ ಸಂತಿ ಬಸ್ತವಾಡದಲ್ಲಿ ಕುರಾನ್‌ ಮತ್ತು ಹದೀಸ್‌ಗಳನ್ನು ಸುಟ್ಟ ಪ್ರಕರಣದಲ್ಲಿ ಪೊಲೀಸರು ವಿನಾಕಾರಣ ಹಿಂದೂಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ, ಗ್ರಾಮಸ್ಥರು ನಗರದಲ್ಲಿ ಬುಧವಾರ ‘ಹಿಂದೂ ಜನಾಕ್ರೋಶ ಯಾತ್ರೆ’ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂಚಾರ ತಡೆದರು. ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕುರಾನ್‌ ಸುಟ್ಟ ಪ್ರಕರಣದಲ್ಲಿ ವಿನಾಕಾರಣ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಹಿಂದೂಗಳು ಕುರಾನ್‌ ಸುಡುವಂಥ ಕೆಟ್ಟ ಕೆಲಸ ಮಾಡುವುದಿಲ್ಲ. ಬರೀ ಹಿಂದೂಗಳನ್ನೇ ಏಕೆ ಗುರಿ ಮಾಡುತ್ತಿದ್ದೀರಿ’ ಎಂದೂ ಪ್ರಶ್ನಿಸಿದರು.

ADVERTISEMENT

‘ಮಸೀದಿಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಯಾವ ಕಾರಣಕ್ಕೆ ತೆಗೆದಿದ್ದಾರೆ? ಘಟನೆ ನಡೆದಾಗ ಮಸೀದಿ ಬೀಗ ಯಾರು ತೆಗೆದಿದ್ದಾರೆ? ಧರ್ಮಗುರು (ಮೌಲಾನಾ) ಮಸೀದಿ ಬಿಟ್ಟು, ಅನುಮಾನಾಸ್ಪದವಾಗಿ ಊರಿಗೆ ಹೋಗಿದ್ದು ಏಕೆ?’ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಧನಂಜಯ ಜಾಧವ, ಕೃಷ್ಣಭಟ್‌, ಪ್ರಸಾದ ಸಡೇಕರ, ಪವನ ನಾಯಕ, ಜ್ಯೋತಿಬಾ ಪಾಟೀಲ, ಬಾಬಾಜಿ ಪಾವಸೆ, ನಾಗೇಂದ್ರ ನಾಯಕ, ರಾಮಾ ಪಾಟೀಲ, ಅಜಯ ಚನ್ನಿಕುಪ್ಪಿ, ವಿಠ್ಠಲ ಅಂಕಲಗಿ, ಗಂಗಾರಾಮ ಗುರುವ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.