ADVERTISEMENT

ಮಲಬಾರ್‌ ಮಳಿಗೆಯಲ್ಲಿ ಸಿಲ್ವರ್ ಶೋ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 14:06 IST
Last Updated 14 ಫೆಬ್ರುವರಿ 2021, 14:06 IST
ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ಸಿಲ್ವರ್ ಶೋಗೆ ಅತಿಥಿಗಳು ಶನಿವಾರ ಚಾಲನೆ ನೀಡಿದರು
ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ಸಿಲ್ವರ್ ಶೋಗೆ ಅತಿಥಿಗಳು ಶನಿವಾರ ಚಾಲನೆ ನೀಡಿದರು   

ಬೆಳಗಾವಿ: ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್‌ ಮಳಿಗೆಯಲ್ಲಿ ಬೆಳ್ಳಿ ಮತ್ತಿತರ ಆಭರಣಗಳ ಪ್ರದರ್ಶನ ಮತ್ತು ಮಾರಾಟದ ‘ಸಿಲ್ವರ್ ಶೋ’ ಹಮ್ಮಿಕೊಳ್ಳಲಾಗಿದೆ.

ಶನಿವಾರ ಆರಂಭವಾಗಿದ್ದು ಫೆ. 28ರವರೆಗೆ ನಡೆಯಲಿದೆ. ಆಕರ್ಷಕ ಆಭರಣಗಳನ್ನು ಪ್ರದರ್ಶಿಸಲಾಗಿದೆ. ಫ್ಯಾಷನ್ ಡಿಸೈನರ್ ಜ್ಯೋತಿ ಜೈನ್, ಈವೆಂಟ್ ಮ್ಯಾನೇಜ್ಮೆಂಟ್ ತಂಡದ ನಿಖಿತಾ ಆರ್. ಬೊಮ್ಮಣ್ಣನವರ, ಶಿಕ್ಷಕಿ ನಾಝಿಯಾ ಸೈಯದ್, ರೇಣುಕಾ ಶುಗರ್ಸ್‌ನ ಹಿರಿಯ ವ್ಯವಸ್ಥಾಪಕಿ ರೇಣು ಯಳ್ಳೂರಕರ ಹಾಗೂ ಗೃಹಿಣಿ ರೇಷ್ಮಾ ಚಾಲನೆ ನೀಡಿದರು.

₹ 5ಸಾವಿರ ಮೌಲ್ಯದ ಬೆಳ್ಳಿ ಆಭರಣ ಖರೀದಿಸುವ ಗ್ರಾಹಕರಿಗೆ ₹ 500 ಮೌಲ್ಯದ ಬೆಳ್ಳಿ ಆಭರಣ ಉಚಿತವಾಗಿ ನೀಡಲಾಗುವುದು. ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ಗುಣಮಟ್ಟ ಖಾತ್ರಿಯ ಆಭರಣಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಕಂಪನಿ ತಿಳಿಸಿದೆ. ಆಸಕ್ತರು ಮಾಹಿತಿಗೆ ಮೊ: 7994435481 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.