ADVERTISEMENT

ತೆಲಸಂಗ: ಆಶಾ ಕಾರ್ಯಕರ್ತೆಯರಿಗೆ ಛತ್ರಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 11:47 IST
Last Updated 21 ಮೇ 2020, 11:47 IST
ತೆಲಸಂಗದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಉಚಿತವಾಗಿ ಛತ್ರಿಗಳನ್ನು ವಿತರಿಸಲಾಯಿತು
ತೆಲಸಂಗದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಉಚಿತವಾಗಿ ಛತ್ರಿಗಳನ್ನು ವಿತರಿಸಲಾಯಿತು   

ತೆಲಸಂಗ: ಗ್ರಾಮದಲ್ಲಿ ಕೊರೊನಾ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಗುರುವಾರ ಉಚಿತವಾಗಿ ಛತ್ರಿಗಳನ್ನು ವಿತರಿಸಲಾಯಿತು.

ಬಿಜೆಪಿ ಮುಖಂಡ ಅಮೋಘ ಖೊಬ್ರಿ ಮಾತನಾಡಿ, ‘ಜೊಲ್ಲೆ ದಂಪತಿಗಳ ಸಾಮಾಜ ಸೇವೆ ಗುರುತಿಸಿ ಜನರೆ ಅವರನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ಸಮಾಜದ ನಾಡಿಮಿಡಿತ ಅರಿತು ಅವರು ಸಮಾಜಮುಖಿ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಗುರುರಾಜ ಕುಂಬಾರ, ಬಿಜೆಪಿ ಮುಖಂಡರಾದ ಡಾ.ಎಸ್.ಐ. ಇಂಚಗೇರಿ, ಡಾ.ಬಿ.ಎಸ್. ಕಾಮನ್, ಇಲ್ಲಿನ ಬೀರೇಶ್ವರ ಸಹಕಾರಿ ಸಂಘದ ಶಾಖಾಧಿಕಾರಿ ಮುರಗೇಶ ಪಾಟೀಲ, ಪಿಡಿಇ ಬೀರಪ್ಪ ಕಡಗಂಚಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.