ಬೈಲಹೊಂಗಲ: 'ವಿಶ್ವಕರ್ಮ ಸಮಾಜ ಕೊಡುಗೆ ಅಪಾರವಿದೆ. ಭಾರತ ದೇಶವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ್ದು ವಿಶ್ವಕರ್ಮ ಸಮಾಜ' ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ವಿಶ್ವಕರ್ಮ ಸಮಾಜ ಬಾಂಧವರು ಕೌಶಲ್ಯತೆ, ಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ರಥ ನಿರ್ಮಾಣ, ದೇವರ ಮೂರ್ತಿಗಳ ನಿರ್ಮಾಣ ಹೀಗೆ ಕಲ್ಲಿನ ಕೆತ್ತನೆ ಮೂಲಕ ಅಂದಚಂದದ ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕರ್ಮ ಸಮಾಜಕ್ಕೆ ಸಾಕಷ್ಟು ಸಹಾಯ-ಸಹಕಾರ ನೀಡಿದ್ದಾರೆ. ಮೋದಿ ಜೀ ಅವರ ಕಾರ್ಯ ಶ್ಲಾಘನೀಯವಾಗಿದೆ. ವಿಶ್ವಕರ್ಮ ಸಮಾಜಕ್ಕೆ ಮತ್ತು ಮೌನೇಶ್ವರ ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ' ಅವರು ನೀಡಿದರು.
ಶಿಗ್ಗಾಂವ ತಾಲ್ಲೂಕಿನ ಹುಲಗೂರಿನ ಮೌನೇಶ್ವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಪುರಸಭೆ ಆವರಣದಿಂದ ಆರಂಭವಾದ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮೌನೇಶ್ವರ ದೇವಸ್ಥಾನ ತಲುಪಿತು. ಸಕಲ ವಾದ್ಯಮೇಳಗಳು ಮೆರವಣಿಗೆಯ ಕಳೆಹೆಚ್ಚಿಸಿದವು. ಶ್ರೀ ಮೌನೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅತಿಥಿಗಳಾಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ, ಸದಸ್ಯರಾದ ಗುರು ಮೆಟಗುಡ್ಡ, ವಾಣಿ ಪತ್ತಾರ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಕಾಳಿಕಾ ಟ್ರಸ್ಟ್ ಕಮೀಟಿ ಅಧ್ಯಕ್ಷ ಮೋಹನ ಪತ್ತಾರ, ಕಾಳಿಕಾ ಮಾತಾ ಮಹಿಳಾ ಸಂಘದ ಅಧ್ಯಕ್ಷೆ ವಿನೋದಾ ಪತ್ತಾರ ಆಗಮಿಸಿದ್ದರು.
ಸಮಾಜ ಮುಖಂಡರಾದ ಮೋಹನ ಪತ್ತಾರ, ಈರಣ್ಣಾ ಪತ್ತಾರ, ಸುನೀಲ ದೇಶನೂರ, ಸಂತೋಷ ಪತ್ತಾರ, ವಿನಾಯಕ ಪತ್ತಾರ, ವಿಜಯ ಪತ್ತಾರ, ದೀಪಕ ಪತ್ತಾರ, ರಾಜು ಬಡೆಘರ ಸೇರಿದಂತೆ ವಿಶ್ವಕರ್ಮ ಸಮಾಜ ಬಾಂಧವರು ಇದ್ದರು. ರಮೇಶ ಪಾರಿಶ್ವಾಡ ಸ್ವಾಗತಿಸಿದರು. ರಾಜು ಬಡಿಗೇರ ನಿರೂಪಿಸಿದರು. ವಕೀಲ ಆರ್.ಕೆ.ಪತ್ತಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.