ADVERTISEMENT

₹60 ಲಕ್ಷ ವೆಚ್ಚದ ಶಾಲಾ ಕೊಠಡಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 23:45 IST
Last Updated 30 ಜುಲೈ 2022, 23:45 IST
ಪಾರಾಗಾನ್ ಕಂಪೆನಿಯಿಂದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ವಿವಿಧ ಕೊಠಡಿಗಳನ್ನು ಸಿ.ಎಸ್.ಷಡಾಕ್ಷರಿ ಉದ್ಘಾಟಿಸಿದರು. ಶಾಸಕ ಆರ್.ಮಂಜುನಾಥ್, ಪಾರಾಗಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ ಜಕಾರಿಯಾ, ಉಪಾಧ್ಯಕ್ಷ ಥಾಮಸ್ ಮಣಿ, ನಿಸರ್ಗ ಶಾಲೆಯ ಸಂಸ್ಥಾಪಕ ಕೆಂಪರಾಜು ಇದ್ದರು
ಪಾರಾಗಾನ್ ಕಂಪೆನಿಯಿಂದ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ವಿವಿಧ ಕೊಠಡಿಗಳನ್ನು ಸಿ.ಎಸ್.ಷಡಾಕ್ಷರಿ ಉದ್ಘಾಟಿಸಿದರು. ಶಾಸಕ ಆರ್.ಮಂಜುನಾಥ್, ಪಾರಾಗಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ ಜಕಾರಿಯಾ, ಉಪಾಧ್ಯಕ್ಷ ಥಾಮಸ್ ಮಣಿ, ನಿಸರ್ಗ ಶಾಲೆಯ ಸಂಸ್ಥಾಪಕ ಕೆಂಪರಾಜು ಇದ್ದರು   

ಪೀಣ್ಯ ದಾಸರಹಳ್ಳಿ: ಸಮಾಜಕ್ಕೆ ಖಾಸಗಿ ಕಂಪನಿಗಳು ಕೊಡುಗೆ ನೀಡಿ, ಸರ್ಕಾರದ ಜೊತೆಗೆ ಕೈ ಜೋಡಿಸುವ ಮೂಲಕ ಸಮಾಜದ ಸದೃಢತೆಗೆ ಮುಂದಾಗಬೇಕು ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ನೆಲಗದರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಮುಖಂಡ ನಿಸರ್ಗ ಕೆಂಪರಾಜು ಅವರ ಮನವಿ ಮೇರೆಗೆ ಪಾರಾಗಾನ್ ಕಂಪನಿ ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಕಟ್ಟಡ, ನವೀಕರಿಸಿದ ಗ್ರಂಥಾಲಯ, ಗಣಕಯಂತ್ರ ಪ್ರಯೋಗಾಲಯ, ಶಾಲಾ ಕಚೇರಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಗಮನಸೆಳೆಯುತ್ತವೆ ಎಂದರೆ ಗುಣಮಟ್ಟದ ಶಿಕ್ಷಣ ನೀಡುವಂತಹ ಶಿಕ್ಷಕರಿದ್ದಾರೆ ಎಂಬ ಹೆಮ್ಮೆ ನಮ್ಮದು. ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಲು ಪಾರಾಗಾನ್‌ನಂತಹ ಕಂಪನಿಗಳು ಮುಂದಾಗಿರುವುದು ಶ್ಲಾಘನೀಯ’ ಎಂದರು.

ADVERTISEMENT

ಶಾಸಕ ಆರ್.ಮಂಜುನಾಥ್, ಪಾರಾಗಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್‌ ಜಕಾರಿಯಾ, ಉಪಾಧ್ಯಕ್ಷ ಥಾಮಸ್ ಮಣಿ, ನಿಸರ್ಗ ಶಾಲೆಯ ಸಂಸ್ಥಾಪಕ ಕೆಂಪರಾಜು, ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಹಿತಾಶ್ವ ರೆಡ್ಡಿ, ಜೆಡಿಎಸ್ ಮುಖಂಡ ನರಸಿಂಹಮೂರ್ತಿ, ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಮೇಶ್, ಮುಖ್ಯ ಶಿಕ್ಷಕ ದಯಾನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.