ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಟ್ಯಾಕ್ಸಿ ಬಾಟ್’

ಅರೆ ರೋಬೋಟಿಕ್ ಟೋಯಿಂಗ್ ಸಾಧನ ನಿಯೋಜಿಸಿದ ವಿಶ್ವದ ಎರಡನೇ ವಿಮಾನನಿಲ್ದಾಣ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:45 IST
Last Updated 14 ಜೂನ್ 2022, 19:45 IST
ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬಾಟ್‌ ಉಪಯೋಗಿಸಿದ ಮೊದಲ ಏರ್‌ ಇಂಡಿಯಾ ವಿಮಾನದ ದೃಶ್ಯ
ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬಾಟ್‌ ಉಪಯೋಗಿಸಿದ ಮೊದಲ ಏರ್‌ ಇಂಡಿಯಾ ವಿಮಾನದ ದೃಶ್ಯ   

ದೇವನಹಳ್ಳಿ: ಎಂಜಿನ್‌ಗಳ ಬಳಕೆಯಿಲ್ಲದೆ ಪ್ರಯಾಣಿಕರೊಂದಿಗೆ ವಿಮಾನವನ್ನು ಬೋರ್ಡಿಂಗ್ ಗೇಟ್‌ನಿಂದ ರನ್‌ವೇಗೆ ಎಳೆದೊಯ್ಯುವಅರೆ ರೋಬೋಟಿಕ್ ಟೋಯಿಂಗ್ ಸಾಧನವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಿಯೋಜಿಸಲಾಗಿದೆ. ಕೆಐಎ ಈ ಸೌಲಭ್ಯ ನಿಯೋಜಿಸಿದ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.

ಈ ಕ್ರಮವು ಇಂಧನವನ್ನು ಉಳಿಸುತ್ತದೆ ಹಾಗೂ ಪರಿಸರ ಸ್ನೇಹಿಯಾಗಿದೆ. ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ವಿಮಾನಕ್ಕೆ ಟ್ಯಾಕ್ಸಿಬಾಟ್ ಸೌಲಭ್ಯವನ್ನು ಬಳಸಿ ಈಚೆಗೆ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಾರತದಲ್ಲಿಟ್ಯಾಕ್ಸಿಬಾಟ್‌ನ ವಿಶೇಷ ನಿರ್ವಾಹಕರಾದ ಕೆಎಸ್ಯು ಏವಿಯೇಷನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಏರ್ ಇಂಡಿಯಾ, ಇದರ ಬಳಕೆಯಿಂದ ಇಂಧನ ಉಳಿತಾಯದ ಗುರಿ ಹೊಂದಿದೆ.

ADVERTISEMENT

ಕಡಿಮೆ ಪ್ರಮಾಣದಲ್ಲಿ ಇಂಗಾಲ ಹೊರಸೂಸುವಿಕೆ. ಶಬ್ದ ಮಾಲಿನ್ಯವೂ ಕಡಿಮೆ. ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಟ್ಯಾಕ್ಸಿ ಬಾಟ್‌ ಕಾರ್ಯನಿರ್ವಹಿಸುತ್ತದೆ.

ಐದು ವರ್ಷಗಳಲ್ಲಿ ಕೆಂಪೇಗೌಡ ಅಂತಾರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಏಳು ಟ್ಯಾಕ್ಸಿಬಾಟ್ ಘಟಕ ನಿಯೋಜಿಸಲು ಉದ್ದೇಶಿಸಿದ್ದು, ಇದರಿಂದ ವಾರ್ಷಿಕ 35,000 ಟನ್ ಕಾರ್ಬನ್ ಹೊರಸೂಸುವಿಕೆ ಕಡಿಮೆಯಾಗಲಿದೆ ಎಂದು ನಿರ್ದೇಶಕ ಅಶ್ವನಿ ಖಾನ್ಹಾ ತಿಳಿಸಿದ್ದಾರೆ.

ಏರ್ ಏಷ್ಯಾ ಇಂಡಿಯಾ ನೆರವಿನಲ್ಲಿ ಈ ಸಾಧನ ಅಳವಡಿಸಲಾಗಿದೆಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಹೇಳಿದರು.

ಟ್ಯಾಕ್ಸಿ ಬಾಟ್ ತಂತ್ರಜ್ಞಾನದಿಂದ ಕಾರ್ಯಾಚರಣೆಯಲ್ಲಿ ವಿಭಿನ್ನತೆ ಹಾಗೂ ದಕ್ಷತೆ ಮೂಡಲಿದ್ದು, ಸ್ವಚ್ಛ ಮತ್ತು ಹಸಿರು ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ಏರ್ ಏಷ್ಯಾ ಇಂಡಿಯಾ ಎಂಡಿ ಮತ್ತು ಸಿಇಒ ಸುನೀಲ್ ಭಾಸ್ಕರನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.