ADVERTISEMENT

ಬೆಂಗಳೂರಿನ ಮತ್ತೊಬ್ಬ ಕಾನ್‌ಸ್ಟೆಬಲ್‌ಗೂ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 23 ಮೇ 2020, 7:45 IST
Last Updated 23 ಮೇ 2020, 7:45 IST
   

ಬೆಂಗಳೂರು: ಬೆಂಗಳೂರಿನ ಸಂಚಾರ ಠಾಣೆಯೊಂದರ ಕಾನ್‌ಸ್ಟೆಬಲ್‌ಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದು, ಇದೀಗ‌ ಮತ್ತೊಬ್ಬ ಕಾನ್‌ಸ್ಟೆಬಲ್‌ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಹಾಲಕ್ಷ್ಮಿ ಲೇಔಟ್ ಶಂಕರ ನಗರದ ನಿವಾಸಿ ಆಗಿರುವ ಕಾನ್‌ಸ್ಟೆಬಲ್, ಎಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಏಪ್ರಿಲ್ 26ರಂದು ಎಸಿಬಿಯಿಂದ ಬಿಡುಗಡೆ ಮಾಡಿ ಭದ್ರತಾ ಕೆಲಸಕ್ಕಾಗಿ ಪಶ್ಚಿಮ ವಿಭಾಗ ವ್ಯಾಪ್ತಿಯ ಠಾಣೆಯೊಂದಕ್ಕೆ ನಿಯೋಜಿಸಲಾಗಿತ್ತು.

ಕಂಟೈನ್‌ಮೆಂಟ್ ಮಾಡಲಾದ ಟಿಪ್ಪುನಗರದಲ್ಲಿ ಅವರು ಭದ್ರತೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು.

ADVERTISEMENT

ಇತ್ತೀಚೆಗಷ್ಟೇ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಶುಕ್ರವಾರ ರಾತ್ರಿ ವರದಿ ಬಂದಿದ್ದು, ಕಾನ್‌ಸ್ಟೆಬಲ್ ವರದಿ ಪಾಸಿಟಿವ್ ಬಂದಿದೆ.

ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಕಾನ್‌ಸ್ಟೆಬಲ್ ಅವರನ್ನುವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆ ಸಂಪರ್ಕದಲ್ಲಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಕ್ರಮ ಕೈಗೊಂಡಿದೆ.

ಕಾನ್‌ಸ್ಟೆಬಲ್ ಭೇಟಿ ನೀಡಿದ್ದ ಎನ್ನಲಾದ ಠಾಣೆ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.ಈ ಮೂಲಕ ನಗರದ ಇಬ್ಬರು ಪೊಲೀಸರಿಗೆ ಸೊಂಕು ತಗುಲಿದಂತಾಗಿದೆ.

ಕಾನ್‌ಸ್ಟೆಬಲ್ ಅವರ ಪತ್ನಿ ಗರ್ಭಿಣಿ. ಅವರನ್ನು ಒಂದು ತಿಂಗಳ ಹಿಂದೆಯೇ ಊರಿಗೆ ಕಳುಹಿಸಿದ ಕಾನ್‌ಸ್ಟೆಬಲ್, ಒಬ್ಬರೇ ಮನೆಯಲ್ಲಿ ಉಳಿದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.