ADVERTISEMENT

ಬೆಂಗಳೂರು | ಪಿಂಚಣಿದಾರರ ರಾಷ್ಟ್ರೀಯ ಮುಖಂಡನ ಮೇಲೆ ಹಲ್ಲೆ; ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 14:38 IST
Last Updated 6 ಆಗಸ್ಟ್ 2023, 14:38 IST
ಇಪಿಎಸ್‌–95, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸಭೆ ಲಾಲ್‌ಬಾಗ್‌ ಆವರಣದಲ್ಲಿ ನಡೆಯಿತು
ಇಪಿಎಸ್‌–95, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸಭೆ ಲಾಲ್‌ಬಾಗ್‌ ಆವರಣದಲ್ಲಿ ನಡೆಯಿತು   

ಬೆಂಗಳೂರು: ‍ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಸಚಿವರನ್ನು ಭೇಟಿ ಮಾಡಿ ಪಿಂಚಣಿದಾರರ ಅಹವಾಲು ಮಂಡಿಸಲು ತೆರಳಿದ್ದ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವತ್ ಮೇಲೆ ನಡೆಸಿರುವ ಹಲ್ಲೆಯನ್ನು ಇಪಿಎಸ್‌–95, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಖಂಡಿಸಿದೆ.

ಲಾಲ್‌ಬಾಗ್‌ ಆವರಣದಲ್ಲಿ ಜರುಗಿದ ಸಂಘಟನೆಯ ಮಾಸಿಕ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಆ.8ರಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ನಿವೃತ್ತರ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಹಲವು ಬಾರಿ ಮಂಡಿಸಿದರೂ ಪ್ರಯೋಜನವಾಗಿಲ್ಲ. ತೀವ್ರ ಹೋರಾಟದ ಅನಿವಾರ್ಯತೆ ಇದೆ. ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶಿಸಬೇಕು ಎಂದು ಇಪಿಎಸ್‌–95, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದರು.

ADVERTISEMENT

‘ಅಶೋಕ್‌ ರಾವತ್‌ ಜೊತೆಗೆ ನಮ್ಮ ಸಂಘಟನೆ ಇದೆ ಎಂಬುದನ್ನು ಈ ಮೂಲಕ ನಾವು ತೋರಿಸಬೇಕು’ ಎಂದು ಅಧ್ಯಕ್ಷ ಶಂಕರ್‌ ಹೇಳಿದರು. ಉಪಾಧ್ಯಕ್ಷ ಆರ್. ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಡೋಲಪ್ಪ, ಸಂಘಟನಾ ಕಾರ್ಯದರ್ಶಿ ಮನೋಹರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.