ADVERTISEMENT

ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಕಿಂಗ್ ಪಿನ್ ಟರ್ಕಿ ಮಹಿಳೆ ಸೇರಿ 9 ಮಂದಿ ಬಂಧನ

ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಹೋಟೆಲ್‌ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 20:22 IST
Last Updated 9 ಜನವರಿ 2024, 20:22 IST
<div class="paragraphs"><p>ಹೋಟೆಲ್‌ ಮೇಲೆ ದಾಳಿ</p></div>

ಹೋಟೆಲ್‌ ಮೇಲೆ ದಾಳಿ

   

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿದೇಶಿ ಮಹಿಳೆ ಸೇರಿ 9 ಆರೋಪಿಗಳನ್ನು ಪೂರ್ವವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಪುಲಕೇಶಿನಗರದಲ್ಲಿ ವಾಸವಾಗಿದ್ದ ಟರ್ಕಿ ದೇಶದ ಬಿಯೋನಾಜ್ ಸ್ವಾಮಿಗೌಡ (39), ಆಕೆಯ ಸಹಚರರಾದ ಒಡಿಶಾದ ಜಿತೇಂದ್ರ ಸಾಹು(43), ಪ್ರಮೋದ್ ಕುಮಾರ್(31), ಮನೋಜ್ ದಾಸ್(23) ಅಸ್ಸಾಂನ ಸೌಮಿತ್ರ ಚಂದ್(26), ಮಹಾಲಕ್ಷ್ಮೀ ಲೇಔಟ್ ನಿವಾಸಿ ಪ್ರಕಾಶ್(32), ಲಗ್ಗೆರೆಯ ವೈಶಾಕ್(22), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್(34) ಮತ್ತು ನಂದಿನಿಲೇಔಟ್ ನಿವಾಸಿ ಅಕ್ಷಯ್(32) ಬಂಧಿತರು.

ADVERTISEMENT

ವಿದೇಶದ 7 ಹಾಗೂ ರಾಜ್ಯದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.

ಹಲಸೂರು ಠಾಣೆ ವ್ಯಾಪ್ತಿಯ ದೊಮ್ಮಲೂರಿನ ದಿ ಲೀಲಾ ಪಾರ್ಕ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.‌

‘ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂನಲ್ಲಿ ‘ಬೆಂಗಳೂರು ಡೇಟಿಂಗ್ ಕ್ಲಬ್’ ಎಂಬ ಗ್ರೂಪ್ ಮೂಲಕ ಗ್ರಾಹಕರನ್ನು ಸೆಳೆದು ದಂಧೆ ನಡೆಸುತ್ತಿದ್ದರು. ಅಲ್ಲದೆ, ವಿದೇಶಿ ಮಹಿಳೆಯರು ಹಾಗೂ ನೆರೆ ರಾಜ್ಯದ ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಬಿಯೋನಾಜ್ ಸ್ವಾಮಿಗೌಡ ದಂಧೆಯ ರೂವಾರಿ’ ಎಂದು ಪೊಲೀಸರು ಹೇಳಿದರು.

‘ಪ್ರಕರಣದ ಸೂತ್ರಧಾರಿ ಬಿಯೋನಾಜ್ 15 ವರ್ಷಗಳ ಹಿಂದೆ ಟರ್ಕಿಗೆ ಬಂದಿದ್ದ ಉದ್ಯಮಿ ರೋಹಿತ್ ಸ್ವಾಮಿಗೌಡ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಬಳಿಕ ಬೆಂಗಳೂರಿಗೆ ಬಂದು ಪೀಣ್ಯದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ರೋಹಿತ್ ಸ್ವಾಮಿಗೌಡ ಮೃತಪಟ್ಟಿದ್ದರು. ನಂತರ ಬಿಯೋನಾಜ್, ಪುಲಕೇಶಿನಗರದಲ್ಲಿ ಎರಡು ಫ್ಲ್ಯಾಟ್ ಖರೀದಿಸಿದ್ದಳು. ಮಧ್ಯವರ್ತಿಗಳ ಮೂಲಕ ವಿದೇಶಿದ ಮಹಿಳೆಯರನ್ನು ಬೆಂಗಳೂರಿಗೆ ಕರೆಸಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದಳು’ ಎಂದು ಪೊಲೀಸರು ಹೇಳಿದರು.

ನಿರ್ವಾಣ್ ಸ್ಪಾ– ತನಿಖೆ ಚುರುಕು:

ಮಹಾದೇವಪುರ ಠಾಣೆ ವ್ಯಾಪ್ತಿಯ ನಿರ್ವಾಣ್ ಸ್ಪಾ ಮೇಲೆ ದಾಳಿ ನಡೆಸಿ ವಿದೇಶಿ ಮಹಿಳೆಯರು ಸೇರಿ 40 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ 33 ಮಂದಿ ಭಾರತೀಯರು ಇದ್ದಾರೆ. ಆರೋಪಿಯಿಂದ ₹5.18 ಲಕ್ಷ ಜಪ್ತಿ ಮಾಡಿದ್ದು, 68 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ನಿರ್ವಾಣ್‌ ಸ್ಪಾದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗೆ ಯಾರೇ ಅಧಿಕಾರಿಗಳು ಬೆಂಬಲ ನೀಡುತ್ತಿದ್ದರು ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ತಿಳಿಸಿದರು.

ಅಕ್ಷಯ್‌
ಜಿತೇಂದ್ರ
ಪ್ರಕಾಶ್‌
ಪ್ರಮೋದ್
ಬಿಯೋನಾಜ್‌
ಮೋಹನ್‌ ದಾಸ್‌
ಸೌಮಿತ್ರ
ವೈಶಾಖ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.