ಬೊಮ್ಮನಹಳ್ಳಿ: ಸಮೀಪದ ಬಂಡೇಪಾಳ್ಯದಲ್ಲಿ ಅಪಾರ್ಟ್‌ಮೆಂಟ್ ಮತ್ತು ಮನೆಗಳ ಒಳಚರಂಡಿ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದರಿಂದ ದುರ್ವಾಸವನೆ ಹೆಚ್ಚಾಗಿದ್ದು, ರೋಗ ಹರಡುವ ಭೀತಿಯೂ ಎದುರಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
‘ರಾಜಕಾಲುವೆಯನ್ನು ‘ಎಲ್’ ಆಕಾರದಲ್ಲಿ ರೂಪಿಸಲಾಗಿದ್ದು, ಅಲ್ಲಲ್ಲಿ ಒತ್ತುವರಿ ಮಾಡಲಾಗಿದೆ. ಜತೆಗೆ ಇಲ್ಲಿ ಹೂಳು ತೆಗೆದಿಲ್ಲ. ಹೀಗಾಗಿ ನೀರು ನಿಂತಲ್ಲೇ ನಿಂತು ಗಬ್ಬು ವಾಸನೆ ಬೀರುತ್ತಿದೆ. ಈ ಬಗ್ಗೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳುತ್ತಿಲ್ಲʼ ಎಂದು ಬಂಡೇಪಾಳ್ಯದ ಗೃಹಿಣಿ ವರಲಕ್ಷ್ಮಿ ಹೇಳಿದರು.
‘ರಾಜಕಾಲುವೆ ಮೂಲಕ ಹರಿದು ಬರುವ ನೀರು ಬಂಡೇಪಾಳ್ಯಕ್ಕೆ ಹೊಂದಿಕೊಂಡಿರುವ ಗಾರ್ವೆಬಾವಿಪಾಳ್ಯ ಕೆರೆಯನ್ನು ಸೇರುತ್ತಿದೆ. ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಮಕ್ಕಳು ವಾಂತಿಬೇದಿ, ಜ್ವರದಿಂದ ಬಳಲುತ್ತಿದ್ದಾರೆʼ ಎಂದು ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.
‘ಕೃಷ್ಣಾರೆಡ್ಡಿ ಬಡಾವಣೆ ಅನಧಿಕೃತ ಬಡಾವಣೆಯಾಗಿದ್ದು, ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಲೇಔಟ್ ನಿರ್ಮಾಣದ ವೇಳೆ ಒಳಚರಂಡಿ ನಿರ್ಮಾಣ ಮಾಡಿಲ್ಲ. ಇದಕ್ಕಾಗಿ ಜಾಗವನ್ನೂ ಬಿಟ್ಟಿಲ್ಲ, ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದೇವೆ’ ಎಂದು ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಹೇಳಿದರು.
ಇಲ್ಲಿನ ನಿವಾಸಿಗಳು ದೂರು ನೀಡಿದ್ದಾರೆ ಈ ವಿಷಯವನ್ನು ಜಲಮಂಡಳಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲಶ್ರೀಲಕ್ಷ್ಮಿ ಬಿಬಿಎಂಪಿ ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.