ADVERTISEMENT

ಪೀಣ್ಯ ದಾಸರಹಳ್ಳಿ: ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 16:02 IST
Last Updated 11 ಫೆಬ್ರುವರಿ 2026, 16:02 IST
ಅಧ್ಯಕ್ಷ ಬಸವರಾಜಣ್ಣ
ಅಧ್ಯಕ್ಷ ಬಸವರಾಜಣ್ಣ   

ಪೀಣ್ಯ ದಾಸರಹಳ್ಳಿ: ಭುವನೇಶ್ವರಿ ನಗರದ ಕಾಯಕಯೋಗಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜಣ್ಣ ಮತ್ತು ಉಪಾಧ್ಯಕ್ಷರಾಗಿ ಬಿ.ಟಿ. ಸುರೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಬಸವರಾಜಣ್ಣ ಮಾತನಾಡಿ, ‘ನಮ್ಮ ಸಹಕಾರಿ ಬಂಧುಗಳು ನನ್ನನ್ನು ಮೂರನೇ ಬಾರಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಹಕಾರಿ ವತಿಯಿಂದ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ’ ಎಂದರು.

ನಿರ್ದೇಶಕರಾಗಿ ಮೇಲಪ್ಪ ಟಿ.ಎಸ್, ಮೋಹನ್ ಬಿ, ಮನೋಹರ್ ಜಿ, ಸುಬ್ಬಯ್ಯ ಸಿ, ಜಗದೀಶ್ ಎಚ್, ಶಿವಶಂಕರ್ ಎ.ಆರ್, ಕುಮಾರಸ್ವಾಮಿ, ರಾಧಿಕಾ ಜಿ, ಲತಾ ಸಾವುಕಾರ್ ಅವರೂ ಅವಿರೋಧವಾಗಿ ಆಯ್ಕೆಯಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.