ADVERTISEMENT

ಬೆಂಗಳೂರು | 19 ಆಸ್ಪತ್ರೆಗಳ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 20:24 IST
Last Updated 30 ಜುಲೈ 2020, 20:24 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಹಾಸಿಗೆ ನೀಡದ 19 ಆಸ್ಪತ್ರೆಗಳ ಪರವಾನಗಿಯನ್ನು ಬಿಬಿಎಂಪಿ ತಾತ್ಕಾಲಿಕವಾಗಿ ರದ್ದುಪಡಿಸಿದೆ.

ಕಂದಾಯ ಸಚಿವರ ಸೂಚನೆಗೆ ಮೇರೆಗೆದಕ್ಷಿಣ ವಲಯದ ಪಾಲಿಕೆ ಜಂಟಿ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳ ತಂಡ ಗುರುವಾರ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ಶೇ 50ರಷ್ಟು ಹಾಸಿಗೆ ಮೀಸಲಿಡದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಪಡಿಸಿ ಈ ಸಂಬಂಧ ಪ್ರಕಟಣೆಯನ್ನು ಆಸ್ಪತ್ರೆ ಮುಂಭಾಗ ಅಳವಡಿಸಿದೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ’ ಎಂದು ದಕ್ಷಿಣ ವಲಯ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.

ADVERTISEMENT

ಆಸ್ಪತ್ರೆಗಳು

ಬಸವನಗುಡಿ:ಅನುಗ್ರಹ ವಿಠ್ಠಲ ಆಸ್ಪತ್ರೆ, ವಿನಾಯಕ ಆಸ್ಪತ್ರೆ, ಪ್ರಶಾಂತ್ ಆಸ್ಪತ್ರೆ, ರಾಧಾಕೃಷ್ಣ ಆಸ್ಪತ್ರೆ
ವಿಜಯನಗರ: ಗುರುಶ್ರೀ ಆಸ್ಪತ್ರೆ, ಕಾಲಭೈರವೇಶ್ವರ ಆಸ್ಪತ್ರೆ, ಪದ್ಮಶ್ರೀ ಆಸ್ಪತ್ರೆ, ಮಾರುತಿ ಆಸ್ಪತ್ರೆ
ಪದ್ಮನಾಭನಗರ: ಪ್ರೊಮೆಡ್ ಆಸ್ಪತ್ರೆ, ಎನ್.ಯು. ಆಸ್ಪತ್ರೆ, ದೀಪಕ್
ಆಸ್ಪತ್ರೆ, ಸೇವಾಕ್ಷೇತ್ರ ಆಸ್ಪತ್ರೆ, ಉದ್ಭವ ಆಸ್ಪತ್ರೆ
ಬಿಟಿಎಂ ಲೇಔಟ್: ಗಂಗೋತ್ರಿ ಆಸ್ಪತ್ರೆ, ಅಕ್ಕೂರ ಆಸ್ಪತ್ರೆ, ಕಾರಂತ್ ಆಸ್ಪತ್ರೆ
ಚಿಕ್ಕಪೇಟೆ: ಎಚ್‌.ಸಿ.ಜೆ ಕ್ಯಾನ್ಸರ್ ಆಸ್ಪತ್ರೆ, ಟ್ರಿನಿಟಿ ಆಸ್ಪತ್ರೆ, ಮಯ್ಯಾ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.