ADVERTISEMENT

ಆ್ಯಸಿಡ್ ದಾಳಿ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 14 ಮೇ 2022, 5:54 IST
Last Updated 14 ಮೇ 2022, 5:54 IST
ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಆರೋಪಿ‌ ನಾಗೇಶ್
ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿರುವ ಆರೋಪಿ‌ ನಾಗೇಶ್   

ಬೆಂಗಳೂರು: ಯುವತಿ‌ ಮೇಲೆ ಆ್ಯಸಿಡ್ ಎರಚಿದ್ದ ಆರೋಪಿ‌ ನಾಗೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ‌ಯತ್ನಿಸಿದ್ದು, ಆತನ‌ ಕಾಲಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ.

ಕೃತ್ಯ‌ ಎಸಗಿ‌ ಪರಾರಿಯಾಗಿದ್ದ ಆರೋಪಿ ನಾಗೇಶ್, ತಮಿಳುನಾಡಿನಲ್ಲಿ ಸ್ವಾಮೀಜಿ ವೇಷದಲ್ಲಿ ಶುಕ್ರವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ತಂಡ ಆತನನ್ನು ಬೆಂಗಳೂರಿಗೆ ಕರೆತರುತ್ತಿತ್ತು.

ಕೆಂಗೇರಿ ಬಳಿ ಮೂತ್ರ ವಿಸರ್ಜನೆಗೆಂದು ಪೊಲೀಸರು ಕಾರು ನಿಲ್ಲಿಸಿದಾಗ ಆರೋಪಿ‌ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಡೆಯಲು ಹೋದ ಹೆಡ್‌ ಕಾನ್‌ಸ್ಟೆಬಲ್‌ ಮಹದೇವಯ್ಯ ಮೇಲೂ‌ ಹಲ್ಲೆ‌ ಮಾಡಿದ್ದ. ಆರೋಪಿಯನ್ನು ಹಿಡಿಯಲು‌ ಮುಂದಾಗಿದ್ದ ಇನ್‌ಸ್ಪೆಕ್ಟರ್, ಶರಣಾಗುವಂತೆ ಹೇಳಿದರು. ಅಷ್ಟಾದರೂ ಆರೋಪಿ ಓಡಲಾರಂಭಿಸಿದ್ದ. ಅವಾಗಲೇ ಇನ್‌ಸ್ಪೆಕ್ಟರ್, ಆರೋಪಿಯ ಬಲಗಾಲಿಗೆ ಗುಂಡು‌ ಹೊಡೆದು ಸೆರೆ ಹಿಡಿದಿದ್ದಾರೆ.

ADVERTISEMENT

ಸದ್ಯ ಆರೋಪಿ‌ ನಾಗೇಶ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು‌ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.