ADVERTISEMENT

Bengaluru Auto Fare Hike | ಆಟೊ ಪ್ರಯಾಣ ದರ ಪ್ರತಿ ಕಿ.ಮೀ.ಗೆ ₹3 ಹೆಚ್ಚಳ

ಕನಿಷ್ಠ ದರ ₹30 ಇದ್ದಿದ್ದು ₹36ಕ್ಕೆ ಏರಿಕೆ * ಆಗಸ್ಟ್‌ 1ರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
ಆಟೊಗಳು
ಆಟೊಗಳು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೊ ಪ್ರಯಾಣ ದರವನ್ನು ಹೆಚ್ಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಸೋಮವಾರ ಆದೇಶ ಹೊರಡಿಸಿದ್ದು, ಪರಿಷ್ಕೃತ ದರ ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ.

ಮೊದಲ ಎರಡು ಕಿ.ಮೀ.ಗೆ ಕನಿಷ್ಠ ₹30 ಇದ್ದ ದರವನ್ನು ₹36ಕ್ಕೆ ಏರಿಸಲಾಗಿದೆ. ಬಳಿಕ ಪ್ರತಿ ಕಿಲೋ ಮೀಟರ್‌ಗೆ ₹15 ಇದ್ದಿದ್ದು ₹18ಕ್ಕೆ ಏರಿದೆ. ಆಟೊದಲ್ಲಿ ಮೂವರು ಅಷ್ಟೇ ಪ್ರಯಾಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾತ್ರಿ 10ರಿಂದ ಬೆಳಿಗ್ಗೆ 5ವರೆಗೆ ಒಂದೂವರೆ ಪಟ್ಟು ಅಧಿಕ ದರ ವಿಧಿಸಲು ಅವಕಾಶವಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷಕ್ಕೆ ₹10 ನೀಡಬೇಕಾಗುತ್ತದೆ. ಲಗೇಜು 20 ಕೆ.ಜಿ.ವರೆಗೆ ಉಚಿತವಾಗಿದ್ದು, ಅದಕ್ಕಿಂತ ಹೆಚ್ಚಿಗೆ ಇದ್ದರೆ ₹10 ದರ ವಿಧಿಬಹುದಾಗಿದೆ. 50 ಕೆ.ಜಿ.ವರೆಗೆ ಮಾತ್ರ ‍ಪ್ರಯಾಣಿಕರು ಆಟೊದಲ್ಲಿ ಲಗೇಜು ಸಾಗಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

2021ರ ಡಿಸೆಂಬರ್‌ನಲ್ಲಿ ಈ ಹಿಂದೆ ಆಟೊ ದರ ಪರಿಷ್ಕರಣೆಯಾಗಿತ್ತು. ಮೊದಲ ಎರಡು ಕಿಲೋಮೀಟರ್‌ಗೆ ಕನಿಷ್ಠ ದರವನ್ನು ₹40ಕ್ಕೆ ಏರಿಸಬೇಕು. ಆ ನಂತರದ ಪ್ರತಿ ಕಿಲೋ ಮೀಟರ್‌ಗೆ ₹20ಕ್ಕೆ ಏರಿಸಬೇಕು ಎಂದು ವಿವಿಧ ಆಟೊ ಸಂಘಟನೆಗಳು ಈಚೆಗೆ ಒತ್ತಾಯಿಸಿದ್ದವು. ದರ ಏರಿಕೆ ಬೇಡ. ಬೈಕ್‌ ಟ್ಯಾಕ್ಸಿಗಳನ್ನು ನಿಷೇಧಿಸಿ ಪ್ರಯಾಣಿಕರು ಆಟೊದಲ್ಲಿ ಬರುವಂತೆ ಮಾಡಿದರೆ ಸಾಕು ಎಂದು ಕೆಲವು ಸಂಘಟನೆಗಳು ಆಗ್ರಹಿಸಿದ್ದವು. ಇದರ ನಡುವೆ ದರ ನಿಗದಿಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಆಟೊ ಸಂಘಟನೆಗಳೊಂದಿಗೆ ಸಭೆಗಳು ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.