ಬೆಂಗಳೂರು: ಮಲ್ಲೇಶ್ವರದ ಮಿಲ್ಕ್ ಕಾಲೊನಿ ರಸ್ತೆಯಲ್ಲಿ ಜೊಮೆಟ್ರಿ ಬ್ರೆವರಿ ಆ್ಯಂಡ್ ಚಿಕನ್ ಪಬ್‌ಗೆ ಸೋಮವಾರ ಮುಂಜಾನೆ ಪಿಸ್ತೂಲು ಹಿಡಿದು ವ್ಯಕ್ತಿಯೊಬ್ಬ ನುಗ್ಗಿ ಹಣ ದೋಚಿ ಪರಾರಿ ಆಗಿದ್ದಾನೆ.
ಪಬ್‌ನ ಕ್ಯಾಶ್ ಕೌಂಟರ್‌ನಲ್ಲಿದ್ದ ₹60 ಸಾವಿರವನ್ನು ಕಳ್ಳ ಹೊತ್ತೊಯ್ದಿದ್ದಾನೆ.
ಭದ್ರತಾ ಸಿಬ್ಬಂದಿ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 309 (ದರೋಡೆ) ಹಾಗೂ 331 (ಅಕ್ರಮ ಪ್ರವೇಶ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ
ಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಸಹಾಯವಾಣಿಗೆ ಕರೆ: ‘ಪಬ್ ಅನ್ನು ಭಾನುವಾರ ರಾತ್ರಿ ಬಂದ್ ಮಾಡಿಕೊಂಡು ವ್ಯವಸ್ಥಾಪಕರು
ಹಾಗೂ ಸಿಬ್ಬಂದಿ ಮನೆಗೆ ತೆರಳಿದ್ದರು. ಭದ್ರತಾ ಸಿಬ್ಬಂದಿ ಮಾತ್ರ ಕಾವಲು ಕಾಯುತ್ತಿದ್ದರು. ಸೋಮವಾರ ಮುಂಜಾನೆ ಪಿಸ್ತೂಲು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಪಬ್‌ಗೆ ನುಗ್ಗಿದ್ದಾನೆ. ಬಳಿಕ ಮೂರನೇ ಮಹಡಿಗೆ ತೆರಳಿ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಿ ಕಳ್ಳತನ ಮಾಡಿ ಪರಾರಿ ಆಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಕಳ್ಳ ಪಿಸ್ತೂಲ್ ಹಿಡಿದುಕೊಂಡು ಪಬ್ ಒಳಕ್ಕೆ ನುಗ್ಗಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರಿಂದ ಶಸ್ತ್ರಾಸ್ತ್ರ ಸಜ್ಜಿತರಾಗಿ ಸ್ಥಳಕ್ಕೆ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿದರು. ಆರಂಭದಲ್ಲಿ ಡ್ರೋನ್ ಸಹಾಯದಿಂದ ಪಬ್ ಒಳಗೆ ಕಳ್ಳನಿದ್ದ ಸ್ಥಳವನ್ನು ಪತ್ತೆಹಚ್ಚುವ ಕಾರ್ಯ ಮಾಡಲಾಯಿತು. ಆದರೆ, ಆತನ ಸುಳಿವು ಸಿಗಲಿಲ್ಲ. ನಂತರ ಶಸ್ತ್ರಾಸ್ತ್ರಸಹಿತ ಪೊಲೀಸರು ಪಬ್ ಒಳಕ್ಕೆ ನುಗ್ಗಿ ಕಾರ್ಯಾಚರಣೆ ನಡೆಸಿದರು. ಅವರಿಗೂ ಕಳ್ಳ ಸಿಗಲಿಲ್ಲ. ಅಷ್ಟರಲ್ಲಿ ಕಳ್ಳ ಹಣ ದರೋಡೆ ನಡೆಸಿ ಪರಾರಿ ಆಗಿರುವುದು ಗೊತ್ತಾಗಿತ್ತು.
ಮಾಹಿತಿ ತಿಳಿದು ಅಕ್ಕಪಕ್ಕದ ನೂರಾರು ಮಂದಿ ಪಬ್ ಎದುರು ಜಮಾಯಿಸಿದ್ದರು.
‘ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಯಿತು.
ಪಬ್ ಒಳಗೆ ಯಾವುದೇ ವ್ಯಕ್ತಿ ಪತ್ತೆಯಾಗಿಲ್ಲ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖೆಯ ಬಳಿಕ ಕಳ್ಳತನ ಮಾಡಿದ್ದ ವ್ಯಕ್ತಿಯ ಕೈಯಲ್ಲಿ ಪಿಸ್ತೂಲ್ ಇತ್ತೇ ಇಲ್ಲವೇ ಎಂಬುದು ಗೊತ್ತಾಗಲಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರು
ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.