
ಬೆಂಗಳೂರು: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನವು 26ನೇ ವಾರ್ಷಿಕೋತ್ಸವದ ಪ್ರಯುಕ್ತ ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ವೆಂಕಟೇಶ್ವರ ದೇವಸ್ಥಾನದ ವೆಂಕೋಬಾಚಾರ್ಯ ಸ್ಮೃತಿ ಸಾಂಸ್ಕೃತಿಕ ಮಂಟಪದಲ್ಲಿ ಸಂಗೀತ–ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ.
20ರಂದು ಸಂಜೆ 6 ಗಂಟೆಯಿಂದ ಹರಿದಾಸ ಕೃತಿಗಳ ಗಾನಾಮೃತ ನಡೆಯಲಿದೆ. ಜಯತೀರ್ಥ ಮೇವುಂಡಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಲಿದ್ದಾರೆ. ಅಕ್ಷಯ್ ಜೋಶಿ (ತಬಲಾ), ಶ್ರೀರಕ್ಷ ಶಾನಭೋಗ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. 21ರಂದು ಸಂಜೆ 6ಕ್ಕೆ ‘ತ್ಯಾಗರಾಜ ವೈಭವಂ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್. ಐಶ್ವರ್ಯ ಹಾಗೂ ಎಸ್. ಸೌಂದರ್ಯ ಅವರಿಂದ ಯುಗಳ ಗಾಯನ ನಡೆಯಲಿದೆ. ಅದಿತಿ ಕೃಷ್ಣ ಪ್ರಕಾಶ್ (ಪಿಟೀಲು), ನಿಕ್ಷಿತ್ ಪುತ್ತೂರು (ಮೃದಂಗ) ಹಾಗೂ ಆರ್. ಕಾರ್ತಿಕ್ (ಖಂಜಿರ) ಅವರು ಸಾಥ್ ನೀಡಲಿದ್ದಾರೆ.
22ರಂದು ಸಂಜೆ 6 ಗಂಟೆಗೆ ‘ಶ್ರೀರಾಮ ಚರಿತ್ರೆ’ ನೃತ್ಯ ವೈಭವ ನಡೆಯಲಿದೆ. ಮಮತಾ ಓಜಾ, ಮಾನಸಿ ಪ್ರಿಯದರ್ಶಿನಿ, ಧರಾಶ್ರೀ ಮಹಾರಾಜಾ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಹಾಸ್ಯ ನಾಟಕ ಪ್ರದರ್ಶನ
ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಇದೇ 22ರ ಸಂಜೆ 6.30ಕ್ಕೆ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಹಾಸ್ಯ ನಾಟಕವು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.
ರಾಜೇಂದ್ರ ಕಾರಂತ ಅವರು ನಾಟಕದ ರಚಿಸಿದ್ದು, ಅಶೋಕ್ ಬಿ. ನಿರ್ದೇಶಿಸಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ. ಸಂಪರ್ಕಕ್ಕೆ: 9945977184 ಅಥವಾ 9916863637
ಹಾಸ್ಯ ನಾಟಕ
ಬೆಂಗಳೂರು: ರಂಗರಸಧಾರೆ ಹವ್ಯಾಸಿ ರಂಗ ತಂಡದಿಂದ ಇದೇ 21ರಂದು ಸಂಜೆ 7 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ‘ಮಾವ...! ಮಾವ...!! ಕಥೆ ಕೇಳು...!!!’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪಾರ್ವತೀಸುತ ಅವರು ಈ ನಾಟಕ ರಚಿಸಿದ್ದಾರೆ. ವಿಜಯ್ ಕಶ್ಯಪ್ ಅವರು ನಿರ್ದೇಶಿಸಿದ್ದಾರೆ.
ಉಡುಪ ಸಂಗೀತೋತ್ಸವ
ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವದ ಅಂಗವಾಗಿ ಇದೇ 20ರಿಂದ 22ರವರೆಗೆ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವದಲ್ಲಿ ಉಡುಪ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.
20ರಂದು ಸಂಜೆ 7ಕ್ಕೆ ಹಿಂದೂಸ್ತಾನಿ ಗಾಯಕಿ ಬೇಗಂ ಪರ್ವಿನ್ ಸುಲ್ತಾನ್ ಅವರಿಂದ ಗಾಯನ ನಡೆಯಲಿದೆ. ರವೀಂದ್ರ ಕಾಟೋಟಿ (ಹಾರ್ಮೋನಿಯಂ), ಓಜಸ್ ಆದ್ಯ (ತಬಲಾ) ಸಾಥ್ ನೀಡಲಿದ್ದಾರೆ. ಬಳಿಕ ಪುರ್ಬಯನ್ ಚಟರ್ಜಿ ಅವರಿಂದ ಸಿತಾರ್ ವಾದನ ನಡೆಯಲಿದೆ. 21ರಂದು ಸಂಜೆ 6ಕ್ಕೆ ತಾಳವಾದ್ಯ ಕಛೇರಿ ನಡೆಯಲಿದೆ. ತಿರುವಾಯೂರು ಭಕ್ತವತ್ಸಲಂ, ನವೀನ್ ಶರ್ಮಾ, ವಿಜಯ ಶ್ಯಾಮರಾವ್ ಚವ್ಹಾಣ್ ಪಾಲ್ಗೊಳ್ಳಲಿದ್ದಾರೆ. ನಂತರ ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ.
22ರಂದು ಸಂಜೆ 7ಕ್ಕೆ ವಿಶ್ವಮೋಹನ್ ಭಟ್ ಅವರಿಂದ ವೀಣಾವಾದನ ಹಮ್ಮಿಕೊಳ್ಳಲಾಗಿದೆ. ಶಶಾಂಕ ಸುಬ್ರಹ್ಮಣ್ಯ, ಹರೀಶ ಶಿವರಾಮ ಕೃಷ್ಣನ್, ದರ್ಶನ್ ದೋಶಿ, ಶೆಲ್ಡನ್ ಡಿಸಿಲ್ವಾ, ಮಂಜುನಾಥ್ ಸತ್ಯಶೀಲ್, ರಾಹುಲ್ ಅಡ್ವಾಣಿ, ಹಿಮಾಂಶು ಮಹಾಂತ ಸಾಥ್ ನೀಡಲಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
‘ಜ್ಞಾನ ದೇಗುಲ’ ನಾಟಕ
ಬೆಂಗಳೂರು: ಜನಪದರು ಸಾಂಸ್ಕೃತಿಕ ವೇದಿಕೆಯು ಇದೇ 20ರಂದು ಸಂಜೆ 7 ಗಂಟೆಗೆ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ‘ಜ್ಞಾನ ದೇಗುಲ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಸಿದ್ದೇಶ್ವರ ನನಸುಮನೆ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.