ADVERTISEMENT

ನೈಜೀರಿಯಾ ಪ್ರಜೆ ಬಂಧನ: ₹11.87 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 20:21 IST
Last Updated 6 ಜನವರಿ 2022, 20:21 IST
ಆರೋಪಿಯಿಂದ ಜಪ್ತಿ ಮಾಡಿರುವ ಮಾದಕ ವಸ್ತು
ಆರೋಪಿಯಿಂದ ಜಪ್ತಿ ಮಾಡಿರುವ ಮಾದಕ ವಸ್ತು   

ಬೆಂಗಳೂರು: ಮಾದಕ ವಸ್ತು ಮಾರಾಟಕ್ಕೆ ಮುಂದಾಗಿದ್ದ ನೈಜೀರಿಯಾದ ಪೆಡ್ಲರ್‌ವೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಮಾದಕ ವಸ್ತು ಹಾಗೂ ಕಾರು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹11.87 ಲಕ್ಷ ಎಂದು ಅಂದಾಜಿಸಲಾಗಿದೆ.

‘ಅಗು ಎಜೆಮ್‌ ಅರುವಾ (41) ಬಂಧಿತ. ನೈಜೀರಿಯಾ ಪ್ರಜೆಯಾಗಿರುವ ಈತ, ವಿದ್ಯಾರಣ್ಯಪುರದ ಶಿರಡಿ ಸಾಯಿ ಲೇಔಟ್‌ನ ರಾಘವ ಮ್ಯಾನ್ಷನ್‌ನಲ್ಲಿ ವಾಸವಿದ್ದ. ಹಳೆ ಮದ್ರಾಸ್‌ ರಸ್ತೆಯಲ್ಲಿರುವ ಗೋಪಾಲನ್‌ ಮಾಲ್‌ ಎದುರು ಈತ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಮಾದಕ ವಸ್ತು ಮಾರಲು ಮುಂದಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿಯಿಂದ ₹4 ಲಕ್ಷ ಮೌಲ್ಯದ 50 ಗ್ರಾಂ ಕೊಕೇನ್‌, ₹2.62 ಲಕ್ಷ ಮೌಲ್ಯದ 105 ಗ್ರಾಂ ಎಂಡಿಎಂಎ, ₹2 ಲಕ್ಷ ಬೆಲೆಯ ಒಟ್ಟು 80 ಎಕ್ಸ್‌ಟೆಸಿ ಮಾತ್ರೆಗಳು, ತಲಾ ₹5 ಸಾವಿರ ಬೆಲೆಯ ಎರಡು ಮೊಬೈಲ್‌, ₹3 ಲಕ್ಷ ಮೌಲ್ಯದ ಚೆವರೋಲೆಟ್‌ ಕಾರು ಹಾಗೂ ₹15,100 ನಗದು ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.