ADVERTISEMENT

ಕಲ್ಕೆರೆ: ಭಕ್ತಾಂಜನೇಯ ದೇಗುಲದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 14:28 IST
Last Updated 13 ಡಿಸೆಂಬರ್ 2024, 14:28 IST
ಕಲ್ಕೆರೆಯಲ್ಲಿ ಭಕ್ತಾಂಜನೇಯ ದೇವರಿಗೆ ನಾಗರಿಕರು ವಿಶೇಷ ಪೂಜೆ ಸಲ್ಲಿಸಿದರು
ಕಲ್ಕೆರೆಯಲ್ಲಿ ಭಕ್ತಾಂಜನೇಯ ದೇವರಿಗೆ ನಾಗರಿಕರು ವಿಶೇಷ ಪೂಜೆ ಸಲ್ಲಿಸಿದರು   

ಕೆ.ಆರ್.ಪುರ: ಸಮೀಪದ ಕಲ್ಕೆರೆಯಲ್ಲಿರುವ ವೈಷ್ಣವಿ ಬಡಾವಣೆಯ ಶ್ರೀಭಕ್ತಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆಯಿಂದ ಗಣಪತಿ ಪೂಜೆ ದೇವರಮೂರ್ತಿಗೆ ಪಂಚಾಮೃತ ಅಭಿಷೇಕ, ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ರಾಮತಾರಕ ಹೋಮ ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಲಾಯಿತು. ವಿವಿಧ ಕಲಾ ತಂಡಗಳು ಭಾವಗೀತೆಗಳು, ಶ್ರೀ ಸಾಯಿ ಸುಗಮ ಸಂಗೀತ, ದೇವರ ನಾಮಗಳು, ಭಜನೆಗಳು, ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ನಡೆಸಿಕೊಟ್ಟರು.

ಕಲ್ಕೆರೆ, ಪೂಜಾ ಬಡಾವಣೆ, ವೈಭವ ಬಡಾವಣೆ, ಕನಕನಗರ, ಕೆ.ಚನ್ನಸಂದ್ರ, ರಾಮಮೂರ್ತಿ ನಗರ, ಕೆ‌.ಆರ್.ಪುರದ ವಿವಿಧೆಡೆಯಿಂದ ಭಕ್ತರು ಬಂದು ದೇವರು ದರ್ಶನ ಪಡೆದರು. 

ADVERTISEMENT

ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕಲ್ಕೆರೆ ಶ್ರೀನಿವಾಸ್, ಮುಖಂಡರಾದ ವೆಂಕಟರಮಣ, ಕೇಶವಮೂರ್ತಿ, ಮುರಳಿ, ಡ್ರೈವರ್ ನಾಗರಾಜ್, ಶಂಕರಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.