ಬೆಂಗಳೂರು: ಕನ್ನಡ ಮಾತನಾಡುವ ವಿಚಾರವಾಗಿ ಎರಡು ಸಮುದಾಯಕ್ಕೆ ಸೇರಿದ ಮಹಿಳೆಯರ ನಡುವೆ ವಾಗ್ವಾದ ನಡೆದಿದ್ದು, ಈ ಸಂಬಂಧ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ನಮ್ಮ ಮೆಟ್ರೊ ನಿಲ್ದಾಣವೊಂದರ ಟಿಕೆಟ್ ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ.
ವಿಡಿಯೊದಲ್ಲಿ ಬುರ್ಖಾಧಾರಿ ಮಹಿಳೆಯು ‘ಹಿಂದಿ ಮಾತಾಡ್ರಿ’ ಎಂದು ಹೇಳುವುದನ್ನು ಕೇಳಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಸೀರೆಯುಟ್ಟ ಮಹಿಳೆಯು, ‘ನೀನೇನು ಮುಖ್ಯಮಂತ್ರಿಯಾ? ಚಲ್ ನಿಕಲ್’ ಎಂದು ಹೇಳುತ್ತಾರೆ.
ಮುಂದುವರಿದು, ‘ಔರತ್ ಹೈ ತು ಸಿದ್ದರಾಮಯ್ಯ ಕಿ?’ (ನೀನು ಸಿದ್ದರಾಮಯ್ಯ ಕಡೆಯವಳೇ?)’ ಎಂದು ಬುರ್ಖಾಧಾರಿ ಮಹಿಳೆ ಕೇಳಿದ್ದಾರೆ. ಇದರಿಂದ ವಾಗ್ವಾದವೂ ಇನ್ನಷ್ಟು ತಾರಕ್ಕೇರಿದೆ.
ಬುರ್ಖಾಧಾರಿ ಮಹಿಳೆಯ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಭಾಷಾ ವಿವಾದವು ವೈಯಕ್ತಿಕ ನಿಂದನೆಗೆ ದಾರಿ ಮಾಡಿಕೊಡಬಾರದು ಎಂದು ನೆಟ್ಟಿಗರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.