ADVERTISEMENT

Namma Metro | ಮೆಟ್ರೊ ಹೊಸ ಮಾರ್ಗದ ನಿಲ್ದಾಣಗಳಲ್ಲಿ ಸಿಗಲಿದೆ ವೈಫೈ

ಎಸಿಇಎಸ್‌ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡ ಬಿಎಂಆರ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 0:15 IST
Last Updated 17 ಜುಲೈ 2025, 0:15 IST
ನಮ್ಮ ಮೆಟ್ರೊ ಹಳದಿ ಮಾರ್ಗ
ನಮ್ಮ ಮೆಟ್ರೊ ಹಳದಿ ಮಾರ್ಗ   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ರೀಚ್‌ 5 ಮತ್ತು 6ರಲ್ಲಿ  ಪ್ರಯಾಣಿಕರಿಗೆ ವೈಫೈ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಅಡ್ವಾನ್ಸ್‌ಡ್‌ ಕಮ್ಯುನಿಕೇಶನ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ (ಎಸಿಇಎಸ್‌) ಇಂಡಿಯಾ ಜೊತೆಗೆ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಒಪ್ಪಂದ ಮಾಡಿಕೊಂಡಿದೆ.

ಈ ಒಡಂಬಡಿಕೆಯಂತೆ ರಾಷ್ಟ್ರೀಯ ವಿದ್ಯಾಲಯ ರಸ್ತೆ–ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ (ರೀಚ್‌ 5) ಮತ್ತು ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗದ (ರೀಚ್‌ 6) ನಿಲ್ದಾಣಗಳಲ್ಲಿ 13 ವರ್ಷ ವೈಫೈ ಸಿಗಲಿದೆ. ಅದಕ್ಕಾಗಿ ಐಬಿಎಸ್‌, ಬಿಟಿಎಸ್‌, ಸೆಲ್ಯುಲರ್‌ ಟವರ್‌ಗಳನ್ನು ಸ್ಥಾಪಿಸಲಿರುವ ಎಸಿಇಎಸ್‌ ನಿರ್ವಹಣೆಯನ್ನೂ ಮಾಡಲಿದೆ.

ಇದರಿಂದ ಹಲವು ಮೊಬೈಲ್‌ ಆಪರೇಟರ್‌ಗಳಿಗೆ ಬೆಂಬಲ ಸಿಗಲಿದೆ. ಮೆಟ್ರೊ ಜಾಗದ ಸಮರ್ಪಕ ಬಳಕೆಯೂ ಆಗುತ್ತದೆ. 4ಜಿ/5ಜಿ ಸೇವೆಗಳು ಲಭ್ಯವಾಗಲಿವೆ. ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡಲಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ತಿಳಿಸಿದ್ದಾರೆ.

ADVERTISEMENT

ಈ ಒಡಂಬಡಿಕೆಗೆ ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್‌. ಶಂಕರ್‌, ಎಸಿಇಎಸ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಎನ್‌. ಮಝರ್‌ ಸಹಿ ಹಾಕಿದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್‌ ನಿರ್ದೇಶಕ ಸುಮತ್‌ ಭಟ್ನಾಗರ್‌, ಎಸಿಇಎಸ್‌ ಗ್ರೂಪ್‌ ಸಿಇಒ ಅಕ್ರಂ ಅಬುರಾಸ್‌ ಉಪಸ್ಥಿತರಿದ್ದರು.

ಹಳದಿ ಮಾರ್ಗದಲ್ಲಿ ರೈಲು ಸಂಚಾರವು ಆಗಸ್ಟ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಗುಲಾಬಿ ಮಾರ್ಗದಲ್ಲಿ 2026ರ ಅಂತ್ಯದೊಳಗೆ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.