ADVERTISEMENT

Bengaluru Metro: ಹಳದಿ ಮಾರ್ಗದಲ್ಲಿ ಸೋಮವಾರ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 11:35 IST
Last Updated 17 ಆಗಸ್ಟ್ 2025, 11:35 IST
<div class="paragraphs"><p>ಹಳದಿ ಮಾರ್ಗ</p></div>

ಹಳದಿ ಮಾರ್ಗ

   

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದ ಎರಡು ಟರ್ಮಿನಲ್‌ಗಳಾದ ಆರ್‌.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರದಿಂದ ನಾಳೆ (ಸೋಮವಾರ) ಬೆಳಿಗ್ಗೆ 5 ಗಂಟೆಗೆ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ.

ಸ್ವಾತಂತ್ರ್ಯೋತ್ಸವ, ವಾರಾಂತ್ಯದಲ್ಲಿ ಪ್ರಯಾಣಿಕನ ಚಲನವಲನ ಗಮನಿಸಿದ್ದು, ಸೋಮವಾರ ವಾಪಸ್‌ ಬರುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆ.19ರಿಂದ ಎಂದಿನಂತೆ ಬೆಳಿಗ್ಗೆ 6.30ಕ್ಕೆ ದಿನದ ಮೊದಲ ಮೆಟ್ರೊ ಆರಂಭವಾಗಲಿದೆ.

ADVERTISEMENT

ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಎಂದಿನಂತೆ ಮೆಟ್ರೊ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.