ADVERTISEMENT

Namma Metro | ಎಂಜಿ ರಸ್ತೆ–ಮಾಗಡಿ ರಸ್ತೆ: ಮಾ.9ಕ್ಕೆ ಮೆಟ್ರೊ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 13:28 IST
Last Updated 7 ಮಾರ್ಚ್ 2025, 13:28 IST
<div class="paragraphs"><p>&nbsp;ನಮ್ಮ ಮೆಟ್ರೊ</p></div>

 ನಮ್ಮ ಮೆಟ್ರೊ

   

ಬೆಂಗಳೂರು: ಹಳಿ ನಿರ್ವಹಣಾ ಕಾಮಗಾರಿ ನಡೆಸಲು ಮಾರ್ಚ್‌ 9ರಂದು ಬೆಳಿಗ್ಗೆ 7ರಿಂದ ಬೆಳಿಗ್ಗೆ 10ರ ವರೆಗೆ ನೇರಳೆ ಮಾರ್ಗದ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ಸಂಚಾರ ಸ್ಥಗಿತಗೊಳ್ಳಲಿದೆ.

ಈ ಅವಧಿಯಲ್ಲಿ ಕಬ್ಬನ್‌ ಪಾರ್ಕ್‌, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಮುಚ್ಚಲಾಗಿರುತ್ತದೆ.

ADVERTISEMENT

ಅಂದು ಬೆಳಿಗ್ಗೆ 10ರವರೆಗೆ ಕ್ಯೂಆರ್ ಟಿಕೆಟ್‌ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಲ್ಲಿ ರೈಲು ಲಭ್ಯ ಇಲ್ಲದೇ ಇರುವುದರಿಂದ ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್‌ ಹಾಗೂ ಟೋಕನ್‌ಗಳನ್ನು ಖರೀದಿಸಬಾರದು.

ಚಲ್ಲಘಟ್ಟ–ಮಾಗಡಿ ರಸ್ತೆ ನಡುವೆ ಹಾಗೂ ಎಂಜಿ ರಸ್ತೆ–ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮೆಟ್ರೊ ರೈಲು ಸಂಚಾರ ಎಂದಿನಂತೆ ಬೆಳಿಗ್ಗೆ 7ರಿಂದ ಇರಲಿದೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.