ADVERTISEMENT

ಬೆಂಗಳೂರು: ರಸ್ತೆ ಡಾಂಬರೀಕರಣಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:30 IST
Last Updated 17 ಡಿಸೆಂಬರ್ 2025, 23:30 IST
<div class="paragraphs"><p>ಡಾಂಬರೀಕರಣಕ್ಕೆ ಒತ್ತಾಯಿಸಿ ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು</p></div>

ಡಾಂಬರೀಕರಣಕ್ಕೆ ಒತ್ತಾಯಿಸಿ ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು

   

ಕೆಂಗೇರಿ: ‘ಮೂರು ವರ್ಷ ಮುಗಿಯುತ್ತಾ ಬಂದರೂ ರಸ್ತೆಗೆ ಡಾಂಬರು ಬೀಳುತ್ತಿಲ್ಲ. ಡಾಂಬರು ಹಾಕುವುದಕ್ಕಾಗಿ ರಸ್ತೆಗೆ ಹಾಕಿರುವ ಜಲ್ಲಿ ಕಲ್ಲನ್ನಾದರೂ ತೆಗೆದು ಉಪಕಾರ ಮಾಡಿ’ ಎಂದು ದೊಡ್ಡ ಬಿದರಕಲ್ಲು ವಾರ್ಡ್‌ ವ್ಯಾಪ್ತಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆ ವೇಳೆ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿ ಜಲ್ಲಿ ಸುರಿಯಲಾಗಿತ್ತು. ಮೂರು ವರ್ಷವಾದರೂ ಗೆದ್ದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ಲಕ್ಷ್ಮೀ ವೆಂಕಟೇಶ್ವರ ಬಡಾವಣೆ ನಿವಾಸಿ ಜಗದೀಶ್ ದೂರಿದರು.

ADVERTISEMENT

‘ಮೂರು ತಿಂಗಳ ಒಳಗೆ ರಸ್ತೆ ಪೂರ್ಣಗೊಳಿಸದಿದ್ದರೆ, ರಸ್ತೆಯಲ್ಲಿರುವ ಜಲ್ಲಿಯನ್ನು ಬಿಬಿಎಂಪಿ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಅನ್ನಪೂರ್ಣೇಶ್ವರಿ ಲೇಔಟ್ ಸೋಮಶೇಖರ್ ಮಾತನಾಡಿ, ‘ರಸ್ತೆ ಸರಿ ಇಲ್ಲದ ಕಾರಣ ಶಾಲೆಯ ಬಸ್‌ಗಳು ಬರುತ್ತಿಲ್ಲ. ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹತ್ತಾರು ವರ್ಷಗಳಿಂದ ದೊಡ್ಡ ಬಿದರಕಲ್ಲು ವಾರ್ಡ್‌ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೀಗಿದ್ದರೂ ಬಹುತೇಕ ಪ್ರದೇಶ, ಮೂಲ ಸೌಕರ್ಯ ಕೊರತೆ ಯಿಂದ ಸೊರಗುತ್ತಿದೆ’ ಎಂದು ಅಯ್ಯಂಗಾರ್‌ ಬಡಾವಣೆ ನಿವಾಸಿ ಗಿರಿಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.