ADVERTISEMENT

ಬೆಂಗಳೂರು: ಸಸ್ಯ ಸಂತೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 3:08 IST
Last Updated 11 ಜುಲೈ 2025, 3:08 IST
<div class="paragraphs"><p>ಸಸ್ಯ</p></div>

ಸಸ್ಯ

   

ಬೆಂಗಳೂರು: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರಣ್ಯಪುರದಲ್ಲಿರುವ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಜುಲೈ 11ರಿಂದ 13ರವರೆಗೆ ಸಸ್ಯ ಸಂತೆಯನ್ನು ಆಯೋಜಿಸಿದೆ. 

ಈ ಸಸ್ಯ ಸಂತೆಯಲ್ಲಿ ಹಣ್ಣಿನ ಕಸಿ ಸಸಿಗಳು, ತರಕಾರಿ ಬೀಜ, ಔಷಧೀಯ ಮತ್ತು ಸುಗಂಧ ಸಸಿಗಳು ಮತ್ತು ಆಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಇತರೆ ಸಾವಯವ ಪರಿಕರಗಳು, ಕೀಟನಾಶಕ, ಕೃಷಿ ಉಪಕರಣಗಳು, ಉದ್ಯಾನ ಪರಿಕರಗಳು ಮತ್ತು ಹೂವಿನ ಕುಂಡಗಳು ಹಾಗೂ ಸಾವಯವ ಆಹಾರ ಪದಾರ್ಥಗಳ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲು ಬಯಸುವವರು 77950 72699, 78920 57925 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.