ADVERTISEMENT

ಬೆಂಗಳೂರು | ಬಿ–ಸ್ಮೈಲ್‌: ‘ಪ್ರಚಾರ ಸಿನಿಮಾ’ಗೆ ₹83 ಲಕ್ಷ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 18:21 IST
Last Updated 28 ಜುಲೈ 2025, 18:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಬೆಂಗಳೂರು: ನಗರದಲ್ಲಿ ಕೈಗೊಳ್ಳಲಿರುವ ಮೆಗಾ ಮತ್ತು ದೀರ್ಘಕಾಲದ ಯೋಜನೆಗಳ ಕುರಿತು ತಯಾರಿಸುವ ‘ಪ್ರಚಾರ ಸಿನಿಮಾ’ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಟ್‌ (ಬಿ–ಸ್ಮೈಲ್‌) ₹83 ಲಕ್ಷ ವೆಚ್ಚ ಮಾಡಲು ನಿರ್ಧರಿಸಿದೆ.

ADVERTISEMENT

ಸಿನಿ ಕ್ಯಾಮೆರಾಗಳನ್ನು ಬಳಸಿ ಕಂಪ್ಯೂಟರ್‌ ಗ್ರಾಫಿಕ್ಸ್‌ ನೊಂದಿಗೆ ಪ್ರೀ– ಪ್ರೊಡಕ್ಷನ್‌ ಹಾಗೂ ಪೋಸ್ಟ್‌– ಪ್ರೊಡಕ್ಷನ್‌, ವಿಎಫ್ಎಕ್ಸ್, ಸಿಜಿಐ ಕಾರ್ಯಗಳೊಂದಿಗೆ ಮೆಗಾ ಯೋಜನೆಗಳ ಆರು ನಿಮಿಷದ ‘ಪ್ರಚಾರ ಸಿನಿಮಾ’ ತಯಾರಿಸಿಕೊಡಲು ಟೆಂಡರ್‌ ಆಹ್ವಾನಿಸಲಾಗಿದೆ. ಬಿಡ್‌ ಸಲ್ಲಿಸಲು ಆಗಸ್ಟ್‌ 8ರಂದು ಅಂತಿಮ ದಿನವಾಗಿದ್ದು, ಕಾರ್ಯಾದೇಶ ನೀಡಿದ ನಂತರದ ಎರಡು ತಿಂಗಳಲ್ಲಿ ‘ಪ್ರಚಾರ ಸಿನಿಮಾ’ ನಿರ್ಮಿಸಿಕೊಡಬೇಕು ಎಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.