ಬೆಂಗಳೂರು ಟ್ರಾಫಿಕ್ ಪೊಲೀಸ್
ಬೆಂಗಳೂರು: ಹೆಚ್ಚು ಅನುಕೂಲಕರ ಮತ್ತು ಬಳಕೆದಾರ ಸ್ನೇಹಿ ಜಾಲತಾಣವನ್ನು ನಗರ ಸಂಚಾರ ಪೊಲೀಸ್ ವಿಭಾಗವು ರೂಪಿಸಿದ್ದು, ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ರೂಪದ ಜಾಲತಾಣವನ್ನು ಅನಾವರಣ ಮಾಡಲಾಯಿತು.
ವಿನೂತನ ನೋಟ, ಸುಲಭವಾಗಿ ಬ್ರೌಸ್ ಮಾಡಬಹುದಾದ ಜಾಲತಾಣ ಇದಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಸಂಚಾರ ನಿರ್ವಹಣೆ, ನಿಯಮ ಜಾರಿ, ರಸ್ತೆ ಸುರಕ್ಷತೆ–ಈ ಮೂರು ಮುಖ್ಯ ವಿಭಾಗಗಳು ಜಾಲತಾಣದಲ್ಲಿವೆ. ಇಲ್ಲಿ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿದೆ. ದೂರುಗಳು ಮತ್ತು ಸಲಹೆಗಳನ್ನು ನೋಂದಾಯಿಸಬಹುದಾಗಿದೆ. ನಿಯಮ ಉಲ್ಲಂಘನೆಯ ಚಲನ್‌ಗಳನ್ನು ಪಾವತಿಸಬಹುದಾಗಿದೆ. ಜತೆಗೆ ವಿವಾದಿತ ಚಲನ್‌ಗಳ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಬಹುದು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ಧಾರೆ.
ಸಂಚಾರ ವಿಭಾಗ ಪೊಲೀಸರು ಹಳೆಯ ಜಾಲತಾಣವನ್ನು ಉನ್ನತೀಕರಣಗೊಳಿಸಿ, ಅದರಲ್ಲಿ ಕೆಲವೊಂದು ಹೊಸ ಆಯ್ಕೆ ಅಳವಡಿಸಿದ್ದಾರೆ. ಸಾರ್ವಜನಿಕರು ಬೇರೆ ಭಾಗಗಳಲ್ಲಿ ಸಂಚರಿಸುವ ವೇಳೆ ಆಯಾ ಭಾಗದ ಸಂಚಾರ ದಟ್ಟಣೆ ತಿಳಿದುಕೊಳ್ಳಲು ಹಾಗೂ ಯಾವ ಮಾರ್ಗದಲ್ಲಿ ಹೋದರೆ ಸುಲಭವಾಗಿ ತಾವು ಹೋಗಬೇಕಾಗಿರುವ ಸ್ಥಳ ತಲುಪಬಹುದು ಎಂಬುದನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ತಿಳಿಸಿದರು.
ವೆಬ್‌ಸೈಟ್: https://btp.karnataka.gov.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.