
ಪ್ರಜಾವಾಣಿ ವಿಶೇಷಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆಲ್ಲ ಪರಿಹಾರ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಸುರಂಗ ರಸ್ತೆಯನ್ನು ನಿರ್ಮಿಸಲು ಹೊರಟಿದೆ. ಆರಂಭದಿಂದಲೂ ವಿರೋಧವನ್ನೇ ಕಂಡಿರುವ ಈ ಟನಲ್ ರಸ್ತೆಯಿಂದ ನಿಜಕ್ಕೂ ನಗರಕ್ಕೆ ಅನುಕೂಲವಿಲ್ಲ ಎಂದು ತಜ್ಞರು ಹೇಳಿದರೆ, ಸಂಚಾರ ದಟ್ಟಣೆ ಸಮಸ್ಯೆಗೆ ಸುರಂಗ ರಸ್ತೆಯೇ ಪರಿಹಾರ ಎಂಬುದು ಸರ್ಕಾರದ ವಾದ. ಏನಿದು ಸುರಂಗ ರಸ್ತೆ ಯೋಜನೆ ? ಲಾಲ್ ಬಾಗ್ ಮತ್ತು ಸ್ಯಾಂಕಿ ಕೆರೆಗೆ ಇದರಿಂದ ಅಪಾಯವಿದೆಯೇ ? ಬೃಹತ್ ಪ್ರಮಾಣದ ಹಣವನ್ನು ಖರ್ಚು ಮಾಡಲಷ್ಟೇ ಈ ಯೋಜನೆ ಮೀಸಲಾಗುತ್ತದೆಯೇ ? ಎಂಬ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.