
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಯಿಸಿದವರು ಚಿಕಿತ್ಸೆ ಅವಧಿಯ ಅನುಭವ ಹಂಚಿಕೊಂಡರು.
ರೋಗದ ವಿರುದ್ಧ ಹೋರಾಟ ವಿವರಿಸಿದ 84 ವರ್ಷದ ಸೂರ್ಯಕಾಂತಂ, 28 ವರ್ಷದ ರಚಿತಾ, 34 ವರ್ಷದ ಶೈಲೇಶ್ ಪಾಂಡೆ, 30 ವರ್ಷದ ಶರಣ್ಯ ಹಾಗೂ 48 ವರ್ಷದ ಶ್ರೀಲಕ್ಷ್ಮಿ, ‘ಶೀಘ್ರ ಚೇತರಿಕೆಗೆ ವೈದ್ಯರು ನಿಗದಿಪಡಿಸಿದ ಚಿಕಿತ್ಸಾ ಕ್ರಮ, ಔಷಧಗಳ ಸೇವನೆ ಅಗತ್ಯ. ರೋಗದ ಬಗ್ಗೆ ಅನಗತ್ಯವಾಗಿ ಭಯಕ್ಕೆ ಒಳಗಾಗಬಾರದು. ಕ್ಯಾನ್ಸರ್ ಕಾಯಿಲೆಯನ್ನು ಎದುರಿಸಲು ಔಷಧ ಹಾಗೂ ಚಿಕಿತ್ಸೆಯ ಜತೆಗೆ ಮಾನಸಿಕ ಶಕ್ತಿ ಅಗತ್ಯ’ ಎಂದು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಪ್ರಗತಿ ಬಗ್ಗೆ ವಿವರಿಸಿದ ಆಸ್ಪತ್ರೆಯ ವೈದ್ಯಕೀಯ ತಜ್ಞರು, ‘ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಕಾಯಿಲೆಯನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಗುಣಪಡಿಸಲು ಸಾಧ್ಯ. ಮೂರು ಮತ್ತು ನಾಲ್ಕನೇ ಹಂತದಲ್ಲಿ ಆಸ್ಪತ್ರೆಗಳಿಗೆ ಬಂದಲ್ಲಿ ರೋಗವನ್ನು ಗುಣಪಡಿಸುವುದು ಕಷ್ಟ. ಕ್ಯಾನ್ಸರ್ ತಡೆಗೆ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಬೇಕು. ರೋಗವನ್ನು ಶೀಘ್ರವಾಗಿ ಪತ್ತೆ ಮಾಡಿ, ಸಕಾಲದಲ್ಲಿ ಚಿಕಿತ್ಸೆ ಒದಗಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.