ADVERTISEMENT

ರೇಸ್ ಸ್ಥಗಿತಕ್ಕೆ ಪ್ರೇಕ್ಷಕರ ಗಲಾಟೆ: ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 12:06 IST
Last Updated 15 ನವೆಂಬರ್ 2019, 12:06 IST
ಪ್ರೇಕ್ಷಕರು ಕುರ್ಚಿಗಳನ್ನು ಧ್ವಂಸಗೊಳಿಸಿರುವುದು
ಪ್ರೇಕ್ಷಕರು ಕುರ್ಚಿಗಳನ್ನು ಧ್ವಂಸಗೊಳಿಸಿರುವುದು   

ಬೆಂಗಳೂರು: ರೇಸ್‌ನಲ್ಲಿ ಮೂರು ಕುದುರೆ ಹಾಗೂ ಇಬ್ಬರು ಜಾಕಿಗಳು ಗಾಯಗೊಂಡ ಹಿನ್ನೆಲೆಯಲ್ಲಿ ರೇಸ್ ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ.

ಇಲ್ಲಿನರೇಸ್ ಕೋರ್ಸ್‌ನಲ್ಲಿಈ ವರ್ಷದ ಮೊದಲನೇ ರೇಸ್ ಅನ್ನು ಶುಕ್ರವಾರ ಆಯೋಜನೆ ಮಾಡಲಾಗಿತ್ತು. ಮಳೆ ಬಂದಿದ್ದರಿಂದ ಕುದುರೆಗಳು ಓಡುವ ಜಾಗದಲ್ಲಿ ನೀರು ನಿಂತಿತ್ತು. ಇದರಿಂದ ಮೂರು ಕುದುರೆಗಳು ಜಾರಿದ್ದರಿಂದ ಅವುಗಳಿಗೆ ಗಾಯವಾಗಿತ್ತು. ಜಾಕಿಗಳಿಗೂ ಗಾಯವಾದ ಹಿನ್ನೆಲೆಯಲ್ಲಿಆಡಳಿತ ಮಂಡಳಿ ರೇಸ್ ನಿಲ್ಲಿಸಿತ್ತು. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಪುಂಡಾಟ ನಡೆಸಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.

ಮೊದಲೇ ರೇಸಿನಲ್ಲಿ ಹಣ ಕಳೆದುಕೊಂಡವರು ಅರ್ಧದಲ್ಲೇ ರೇಸ್‌ ನಿಲ್ಲಿಸಿದ್ದರಿಂದ ಪ್ರಕ್ಷೇಕರು ಆವರಣದಲ್ಲಿದ್ದ ಕುರ್ಚಿ, ಟಿ.ವಿ. ಟೇಬಲ್‌ಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೇಕ್ಷಕರನ್ನು ಚದುರಿಸಿಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ADVERTISEMENT

ಘಟನೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.