ADVERTISEMENT

ಬೆಂಗಳೂರು | ಊಟದಲ್ಲಿ ಜಿರಲೆ ಪತ್ತೆ: ಹೋಟೆಲ್‌ ಸಿಬ್ಬಂದಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 14:37 IST
Last Updated 5 ಜನವರಿ 2024, 14:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜಭವನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿದ್ದು ಅದನ್ನು ಪ್ರಶ್ನಿಸಿದ್ದಕ್ಕೆ ವಕೀಲರೊಬ್ಬರ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

ಮಲ್ಲೇಶ್ವರದ ವಕೀಲೆ ಶೀಲಾ ದೀಪಕ್ ಅವರ ದೂರು ಆಧರಿಸಿ ಹೋಟೆಲ್‌ನ ಇಬ್ಬರು ಸಿಬ್ಬಂದಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

‘ಶೀಲಾ ಅವರು ಗುರುವಾರ ತಮ್ಮ ಸಹೋದ್ಯೋಗಿಗಳ ಜತೆಗೆ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ರೋಟಿ ಹಾಗೂ ಪನ್ನೀರ್ ಗ್ರೇವಿಗೆ ಆರ್ಡರ್‌ ಮಾಡಿದ್ದರು. ಪನ್ನೀರ್ ಗ್ರೇವಿಯಲ್ಲಿ ಜಿರಳೆ ಕಂಡು ಬಂದಿತ್ತು. ವಕೀಲೆ ಹಾಗೂ ಇತರೆ ಗ್ರಾಹಕರು ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಪ್ರಶ್ನಿಸಿದ್ದರು. ಅದಾದ ಮೇಲೆ ಬೇರೆ ಊಟ ಕೊಡುತ್ತೇವೆ ಎಂದು ಸಿಬ್ಬಂದಿ ಹೇಳಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಬಳಿಕ, ಅಡುಗೆ ಕೋಣೆಯನ್ನು ಪರಿಶೀಲಿಸಿದಾಗ ಅಲ್ಲೂ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿತ್ತು.’

ಬಳಿಕ ತಮ್ಮ ಮೊಬೈಲ್‌ನಲ್ಲಿ ಹೋಟೆಲ್ ಅಡುಗೆ ಕೋಣೆಯ ಅವ್ಯವಸ್ಥೆಯನ್ನು ವಿಡಿಯೊ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆಗ ಹೋಟೆಲ್‌ನ ಇಬ್ಬರು ಮಹಿಳಾ ಹಾಗೂ ಒಬ್ಬ ಪುರುಷ ಸಿಬ್ಬಂದಿ ವಕೀಲೆ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಶೀಲಾ ಅವರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಜೊತೆಗೆ ಆಹಾರ ಅಧಿಕಾರಿಗಳಿಗೂ ಕರೆ ಮಾಡಿ ವಿಚಾರ ತಿಳಿಸಿದ್ದರು. ನಂತರ, ಹೋಟೆಲ್ ಸಿಬ್ಬಂದಿ ವಿರುದ್ಧ ಶೀಲಾ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.