ADVERTISEMENT

ಕಬ್ಬನ್‌ ಉದ್ಯಾನದಲ್ಲಿ ಧೂಮಪಾನ ತಡೆಯಲು ಕಾಫಿ, ಟೀ ಮಾರಾಟ ನಿಷೇಧ

ಧೂಮಪಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:37 IST
Last Updated 29 ಜನವರಿ 2020, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಧೂಮಪಾನ ತಡೆಯುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹೆಜ್ಜೆ ಇಟ್ಟಿದೆ. ಸಿಗರೇಟ್‌ ಮಾರಾಟಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದ್ದ ಕಾಫಿ ಹಾಗೂ ಟೀ ಮಾರಾಟವನ್ನು ಉದ್ಯಾನದ ಒಳಭಾಗದಲ್ಲಿ ನಿಷೇಧಿಸಿದೆ.

ಉದ್ಯಾನದ ಬಾಲಭವನ ರಸ್ತೆ, ಮೆಟ್ರೊ ನಿಲ್ದಾಣಗಳ ಬಳಿಯೂ ಕೆಲ ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಕಾಫಿ, ಟೀ ಮಾರಾಟ ಮಾಡುತ್ತಾರೆ. ಇನ್ನು ಮುಂದೆ ಉದ್ಯಾನದಲ್ಲಿ ಟೀ ಮಾರಾಟ ಮಾಡಿದರೆ ದುಬಾರಿ ದಂಡ ಬೀಳಲಿದೆ.

‘ಹಲವು ವ್ಯಾಪಾರಿಗಳುಉದ್ಯಾನವೆಲ್ಲ ಸಂಚರಿಸಿ ಅನಧಿಕೃತವಾಗಿ ಟೀ ಮಾರುತ್ತಾರೆ. ಟೀಕುಡಿಯುವ ವೇಳೆ ಕೆಲವರು ಉದ್ಯಾನದಲ್ಲೇ ಕೂತು ಧೂಮಪಾನ ಮಾಡುತ್ತಾರೆ. ಟೀ ಕುಡಿದ ನಂತರ ಪ್ಲಾಸ್ಟಿಕ್‌ ಕಪ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಉದ್ಯಾನದ ಸ್ವಚ್ಛತೆಗೆ ಧಕ್ಕೆ ತರುತ್ತಾರೆ. ಧೂಮಪಾನದಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೂ ಕಿರಿಕಿರಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಕಾಫಿ, ಟೀ ಮಾರಾಟ ನಿಷೇಧಿಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಕಬ್ಬನ್‌ ಉದ್ಯಾನ) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.