ADVERTISEMENT

ದಾಸರಹಳ್ಳಿ: ಸಾಮೂಹಿಕ ಗಣೇಶೋತ್ಸವಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 14:48 IST
Last Updated 13 ಸೆಪ್ಟೆಂಬರ್ 2025, 14:48 IST
ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ಮತ್ತು ಪ್ರಶಂಸನ ಪತ್ರವನ್ನು ಎಸ್‌. ಮುನಿರಾಜು, ಸುಜಾತ ಮುನಿರಾಜು ವಿತರಿಸಿದರು
ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ಮತ್ತು ಪ್ರಶಂಸನ ಪತ್ರವನ್ನು ಎಸ್‌. ಮುನಿರಾಜು, ಸುಜಾತ ಮುನಿರಾಜು ವಿತರಿಸಿದರು   

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂಇಐ ಆಟದ ಮೈದಾನದ ಬಾಲಗಂಗಾಧರನಾಥ ಮಹಾಸ್ವಾಮಿ ರಂಗಮಂದಿರದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಗಣೇಶೋತ್ಸವಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.

ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದು ವಿಜೇತರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.

ಎಸ್. ಮುನಿರಾಜು ಮಾತನಾಡಿ, ‘ಗಾಯಕರಾದ ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ತಂಡದಿಂದ ಸಂಗೀತ ರಸಸಂಜೆ, ಭಾನುವಾರ ಬೆಳಿಗ್ಗೆಯಿಂದ ಪೂಜಾ ವಿಧಾನಗಳು ಜರುಗಲಿವೆ. ಸಂಜೆ ಗಣೇಶನ ಪ್ರಸಾದವಾದ ಲಡ್ಡು ಹರಾಜು ಹಾಕಲಾಗುವುದು. 51 ಗಣೇಶ ಮೂರ್ತಿಗಳನ್ನು ಸಾಮೂಹಿಕ ಕಲಾತಂಡಗಳ ಮೆರವಣಿಗಳೊಂದಿಗೆ ಬಾಗಲಗುಂಟೆ, ಮಲ್ಲಸಂದ್ರ ಪೈಪ್ ಲೈನ್, ದಾಸರಹಳ್ಳಿ ಮೆಟ್ರೊ ಮುಖಾಂತರ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜಿಸಲಾಗುವುದು. ಸಾಮೂಹಿಕ ಕಲಾತಂಡಗಳ ಮೆರವಣಿಗೆ ನಡೆಯಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.