ADVERTISEMENT

ಶಾಲೆಗಳ ದತ್ತು ಚಳವಳಿಯಾಗಲಿ: ಪ್ರೊ. ಎಂ ಆರ್. ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:59 IST
Last Updated 7 ನವೆಂಬರ್ 2022, 20:59 IST
ವೀರಭದ್ರ ನಗರ ಮತ್ತು ಹೊಸಕೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಿದರು. ಸಚಿವ ಮುನಿರತ್ನ, ಹೃದ್ರೋಗ ತಜ್ಞೆಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಇದ್ದರು.
ವೀರಭದ್ರ ನಗರ ಮತ್ತು ಹೊಸಕೆರೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪ್ರೊ. ಎಂ.ಆರ್‌. ದೊರೆಸ್ವಾಮಿ ಅವರು ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಿದರು. ಸಚಿವ ಮುನಿರತ್ನ, ಹೃದ್ರೋಗ ತಜ್ಞೆಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಇದ್ದರು.   

ಬೆಂಗಳೂರು:ಪಿಇಎಸ್ ಸಂಸ್ಥೆಗಳ ಸಂಸ್ಥಾಪಕ ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎಂ ಆರ್. ದೊರೆಸ್ವಾಮಿ ಅವರ ಜನ್ಮದಿನದ ಅಂಗವಾಗಿ ಸೋಮವಾರ ಸಂಸ್ಥಾಪಕರ ದಿನ ಆಚರಿಸಲಾಯಿತು.

ಪಿಇಎಸ್ ವಿಶ್ವವಿದ್ಯಾಲಯ ದತ್ತು ಪಡೆದಿರುವ ವೀರಭದ್ರ ನಗರ ಮತ್ತು ಹೊಸಕೆರೆಹಳ್ಳಿಯಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಜನ್ಮದಿನದ ಅಂಗವಾಗಿ ಆಯೋಜಿಸಲಾಗಿತ್ತು.

ಹೃದ್ರೋಗತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ‘ದೊರೆಸ್ವಾಮಿ ಅವರದ್ದು ಸಮರ್ಪಣೆಯ ಜೀವನ. ಜ್ಞಾನವನ್ನು ಪಸರಿಸುವ ಕೈಂಕರ್ಯವನ್ನು ದೊರೆಸ್ವಾಮಿ ಅವರು ಕೈಗೊಂಡಿದ್ದಾರೆ’ ಎಂದರು.

ADVERTISEMENT

ಪ್ರೊ.ಎಂ.ಆರ್‌.ದೊರೆಸ್ವಾಮಿ ಮಾತನಾಡಿ, ‘ಸರ್ಕಾರಿ ಶಾಲೆಗಳ ದತ್ತು ಸಾಮಾಜಿಕ ಚಳವಳಿಯಾಗಬೇಕು’ ಎಂದು ಹೇಳಿದರು.

‌ಸಚಿವ ಮುನಿರತ್ನ,ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಜಿ.ಸೂರ್ಯಪ್ರಸಾದ್, ಕುಲಸಚಿವ ಡಾ.ಕೆ. ಎಸ್.ಶ್ರೀಧರ್ ಹಾಗೂ ವೀರಭದ್ರನಗರದ ಮತ್ತು ಹೊಸಕೆರೆಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.