ADVERTISEMENT

ಬೆಂಗಳೂರು: ದುಗ್ಗಣ್ಣನಿಗೆ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 21:40 IST
Last Updated 21 ಜನವರಿ 2026, 21:40 IST
<div class="paragraphs"><p>ಎಂ. ದುಗ್ಗಣ್ಣ ಸಾವಂತ</p></div>

ಎಂ. ದುಗ್ಗಣ್ಣ ಸಾವಂತ

   

ಬೆಂಗಳೂರು: ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ನೀಡುವ 2026ನೇ ಸಾಲಿನ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿಗೆ ಮೂಲ್ಕಿಯ ಎಂ. ದುಗ್ಗಣ್ಣ ಸಾವಂತ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಸ್ಮರಣ ಸಂಚಿಕೆ ಒಳಗೊಂಡಿದೆ.

ಜ. 26ರಂದು (ಸೋಮವಾರ) ಮಧ್ಯಾಹ್ನ 3.30ಕ್ಕೆ ಬಸವನಗುಡಿಯ ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುವ ಮೈತ್ರಿಕೂಟದ ವಾರ್ಷಿಕೋತ್ಸವ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮೈತ್ರಿಕೂಟದ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.