ADVERTISEMENT

ಇಸ್ಕಾನ್‌ನಲ್ಲಿ ನವರಾತ್ರಿ ಸಂಭ್ರಮ: 15 ಅಡಿ ಎತ್ತರದ ರಾವಣ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 10:20 IST
Last Updated 3 ಅಕ್ಟೋಬರ್ 2025, 10:20 IST
   

ಬೆಂಗಳೂರು: ಎಚ್‌.ಬಿ.ಆರ್ ಲೇಔಟ್‌ನ ಇಸ್ಕಾನ್‌ನಲ್ಲಿ ಗುರುವಾರ ನವರಾತ್ರಿ ಆಚರಿಸಲಾಯಿತು.

ಈ ವೇಳೆ 15 ಅಡಿ ಎತ್ತರದ ರಾವಣ ಪ್ರತಿಕೃತಿಯನ್ನು ದಹನ ಮಾಡಲಾಯಿತು.

ಹಬ್ಬದ ಸಂಭ್ರಮ, ಸಾಂಸ್ಕೃತಿಕ ಸೊಬಗು ಮತ್ತು ಭಕ್ತಿಯ ವಾತಾವರಣವನ್ನು ಅನುಭವಿಸುವ ಅವಕಾಶ ಜನರಿಗೆ ಕಲ್ಪಿಸಿ ಕೊಡಲಾಯಿತು.

ADVERTISEMENT

ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಆಹಾರ ಮೇಳದಲ್ಲಿ ಭಕ್ತರು ಸಾಂಪ್ರದಾಯಿಕ ತಿನಿಸುಗಳ ರುಚಿ ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.