ADVERTISEMENT

ಗಾಂಧಿ ಜಯಂತಿ ಕೊನೆಗೂ ಆಚರಣೆ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಮುಂದೂಡಿದ್ದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:22 IST
Last Updated 12 ಅಕ್ಟೋಬರ್ 2019, 20:22 IST
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕುಲಪತಿ ಪ್ರೊ.ಎಸ್‌. ಜಾಫೆಟ್‌ ಇದ್ದರು
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕುಲಪತಿ ಪ್ರೊ.ಎಸ್‌. ಜಾಫೆಟ್‌ ಇದ್ದರು   

ಬೆಂಗಳೂರಿನ: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಇದೇ 2ರಂದು ಆಚರಿಸದೆ ಮುಂದೂಡಿದ್ದಗಾಂಧಿ ಜಯಂತಿಯನ್ನು ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಗಾಂಧಿ-150 ಸಂಭ್ರಮಾಚರಣೆ ಮತ್ತು ಅವಲೋಕನ’ ಹೆಸರಿನಲ್ಲಿ ಆಯೋಜಿಸಲಾಯಿತು.

‘ದೇಶದ ಮೇಲೆ ಅಭಿಮಾನ ಇದೆ ಎಂದರೆ ಸಾಲದು,ಜಾತೀಯತೆ ಬಿಟ್ಟು ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಹೇಳಿದರು.

‘ಈ ದೇಶ, ಪ್ರಕೃತಿ ನಮಗಾಗಿ ಅಲ್ಲ, ಎಲ್ಲರಿಗಾಗಿ. ಕೆಲವರು ಅವಶ್ಯಕತೆ ಮೀರಿ, ಬಳಕೆ ವಸ್ತುಗಳ ಸಂಗ್ರಹಿಸುತ್ತಾರೆ. ಇದು ತಪ್ಪು’ ಎಂದರು.

ADVERTISEMENT

ಕವಿಸಿದ್ಧಲಿಂಗಯ್ಯ ಮಾತನಾಡಿ, ‘ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕು. ಇದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕನ್ನಡ ಅಧ್ಯಯನ ಕೇಂದ್ರ ಆರಂಭಿಸಿ ಕನ್ನಡ ಬೆಳವಣಿಗೆಗೆ ಚಟುವಟಿಕೆಗಳನ್ನು
ಪ್ರೋತ್ಸಾಹಿಸಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಬಿ.ಎಲ್.ಶಂಕರ್, ಕುಲಪತಿ ಪ್ರೊ.ಎಸ್.ಜಾಫೆಟ್, ಕುಲಸಚಿವ ಪ್ರೊ.ವಿ. ಶಿವರಾಂ ಇದ್ದರು.

ವಿವಾದ:ಜಗತ್ತಿನೆಲ್ಲೆಡೆ ಅಕ್ಟೋಬರ್ 2ರಂದೇಆಚರಿಸಬೇಕಿರುವ ಗಾಂಧಿ ಜಯಂತಿಯನ್ನು ವಿಶ್ವವಿದ್ಯಾಲಯವು ಮುಂದೂಡಿದ್ದು ವಿವಾದಕ್ಕೆ ಕಾರಣವಾಗಿತ್ತು.ಎರಡು ದಿನಗಳ ಬಳಿಕ ಎಬಿವಿಪಿ ವತಿಯಿಂದಲೇ ಗಾಂಧಿ ಜಯಂತಿ ಆಚರಿಸಿ, ವಿಶ್ವವಿದ್ಯಾಲಯದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಗಾಂಧಿ ಜಯಂತಿ ರದ್ದುಪಡಿಸಿಲ್ಲ, ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದೂಡಲಾಗಿದೆಯಷ್ಟೇ ಎಂದು ಕುಲಪತಿ ಆಗ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.