
ಪ್ರಜಾವಾಣಿ ವಾರ್ತೆ
ಕೆ.ಆರ್.ಪುರ: ಜೀವ ರಕ್ಷಣೆಯ ಮಹತ್ವದ ಕಾರ್ಯಾಚರಣೆಯಾಗಿ ಡೊಡ್ಡನೆಕ್ಕುಂದಿಯ ಕಿಮ್ಸ್ ಆಸ್ಪತ್ರೆಯಿಂದ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಗೆ ‘ಗ್ರೀನ್ ಕಾರಿಡಾರ್’ನಲ್ಲಿ ಹೃದಯವನ್ನು ರವಾನಿಸಲಾಯಿತು.
ದೊಡ್ಡ ನಕ್ಕುಂದಿಯ ಕಿಮ್ಸ್ ಆಸ್ಪತ್ರೆ ಯಿಂದ ಬಿ.ನಾರಾಯಣಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್‌ಪಾಳ್ಯ, ಹೂಡಿ ವೃತ್ತ, ರಾಜಪಾಳ್ಯ ಮಾರ್ಗವಾಗಿ ವಾಹನ ಸಾಗಿತು. ಒಟ್ಟು ಏಳು ಕಿಮೀ ದೂರವನ್ನು ಏಳು ನಿಮಿಷಗಳಲ್ಲಿ ಕ್ರಮಿಸಿತು. ಮಹದೇವಪುರ ಸಂಚಾರ ಪೊಲೀಸರು ಸಹಕಾರ ನೀಡಿದರು.
ವೈದ್ಯರು ಮತ್ತು ಪೊಲೀಸರ ಸಮನ್ವಯದಿಂದ ಹೃದಯವನ್ನು ನಿಗದಿತ ಸಮಯದಲ್ಲಿ ವೈಟ್ ಫೀಲ್ಡ್ ಆಸ್ಟರ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.