ಬಸ್ ಚಲಾಯಿಸುತ್ತಿದ್ದಾಗ ಹೃದಯಾಘಾತ: BMTC ಚಾಲಕ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದು, ನಿರ್ವಾಹಕ ಕೂಡಲೆ ಬಸ್ ನಿಲ್ಲಿಸಿ ಅಪಘಾತವಾಗುವುದನ್ನು ತಪ್ಪಿಸಿದ್ದಾರೆ.
ಹಾಸನ ನಿವಾಸಿ ಕಿರಣ್ ಕುಮಾರ್ (38) ಮೃತಪಟ್ಟವರು. ಬುಧವಾರ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ಬರುತ್ತಿದ್ದರು. ನೆಲಮಂಗಲ ತಾಲ್ಲೂಕಿನ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ತಲುಪಿದಾಗ ಚಾಲಕ ಕಿರಣ್‌ಕುಮಾರ್‌ಗೆ ಹೃದಯಾಘಾತವಾಗಿದೆ.
ನಿಯಂತ್ರಣ ತಪ್ಪಿ ಅವರು ವಾಲಿದರು. ಕೂಡಲೇ ನಿರ್ವಾಹಕ ಓಬಳೇಶ್ ಓಡಿ ಬಂದು ಬ್ರೇಕ್ ಹಾಕಿ ವಾಹನವನ್ನು ನಿಯಂತ್ರಿಸಿ ಅವಘಡವನ್ನು ತಪ್ಪಿಸಿದರು. ಚಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.