ಬೆಂಗಳೂರು: ನಗರದ ಹೆಬ್ಬಾಳದಲ್ಲಿ ನಿರ್ಮಿಸಲಾದ ನೂತನ ಮೇಲ್ಸೇತುವೆ ಸೋಮವಾರ ಲೋಕಾರ್ಪಣೆಗೊಂಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೂತನ ಮೇಲ್ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೇಲ್ಸೇತುವೆಯಲ್ಲಿ ತಮ್ಮ ಹಳೆಯ ಬೈಕ್ ಓಡಿಸಿದರು.
ಬೈಕ್ ಓಡಿಸುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ‘ನನ್ನ ಹಳೆಯ ಯೆಜ್ಡಿ ರೋಡ್‌ಕಿಂಗ್ ಬೈಕ್ ಅನ್ನು ಚಲಾಯಿಸುವ ಮೂಲಕ ಕಾಲೇಜು ದಿನಗಳನ್ನು ಮೆಲುಕು ಹಾಕಿಕೊಂಡೆ’ ಎಂದು ಹೇಳಿದ್ದಾರೆ.
‘ಹೆಬ್ಬಾಳದ ಮೂಲಕ ಸಂಚರಿಸುವವರಿಗೆ ಈ ಮೇಲ್ಸೇತುವೆ ಗೇಮ್ ಚೇಂಜರ್ ಆಗಿರಲಿದೆ. 700 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು ₹ 80 ಕೋಟಿ ವೆಚ್ಚದಲ್ಲಿ ಕೇವಲ 7 ತಿಂಗಳಲ್ಲಿ ನಿರ್ಮಿಸಲಾಗಿದೆ. ಇದು ಸಂಚಾರ ದಟ್ಟಣೆಯನ್ನು ಶೇ 30ರಷ್ಟು ಕಡಿಮೆ ಮಾಡಲಿದೆ. ಪ್ರಯಾಣದ ಗುಣಮಟ್ಟವನ್ನು ಸುಧಾರಿಸಲಿದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.