ADVERTISEMENT

ಬೆಂಗಳೂರು: ಐಸಿಯು ನಿರ್ವಹಣೆಗೆ ತಜ್ಞ ವೈದ್ಯರ ಹುದ್ದೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 15:43 IST
Last Updated 9 ಸೆಪ್ಟೆಂಬರ್ 2025, 15:43 IST
   

ಬೆಂಗಳೂರು: ಆರೋಗ್ಯ ಇಲಾಖೆಯಡಿ ಬರುವ 19 ಜಿಲ್ಲಾ ಆಸ್ಪತ್ರೆಗಳು ಹಾಗೂ 147 ತಾಲ್ಲೂಕು ಆಸ್ಪತ್ರೆಗಳ ತೀವ್ರ ನಿಗಾ ಘಟಕ (ಐಸಿಯು) ನಿರ್ವಹಣೆಗೆ ತಜ್ಞ ವೈದ್ಯರ ಹುದ್ದೆ ಸೃಜಿಸಿ ಆದೇಶ ಹೊರಡಿಸಲಾಗಿದೆ. 

ಒಟ್ಟು 185 ಹುದ್ದೆಗಳನ್ನು ಸೃಜಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳ ಐಸಿಯುಗಳಿಗೆ ತಲಾ ಇಬ್ಬರು ತಜ್ಞ ವೈದ್ಯರಂತೆ 38 ಹುದ್ದೆಗಳು, ತಾಲ್ಲೂಕು ಆಸ್ಪತ್ರೆಗಳ ಐಸಿಯುಗಳಿಗೆ ತಲಾ ಒಬ್ಬರು ತಜ್ಞ ವೈದ್ಯರಂತೆ 147 ಹುದ್ದೆಗಳ ಸೃಜನೆಗೆ ಅನುಮತಿ ದೊರೆತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT