ADVERTISEMENT

ಬೆಂಗಳೂರು | ನಾಡ ಬಂದೂಕು ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:54 IST
Last Updated 29 ಮೇ 2025, 15:54 IST
ಸಮೀರ್
ಸಮೀರ್   

ಬೆಂಗಳೂರು: ಹೊರ ರಾಜ್ಯದಿಂದ ನಾಡ ಬಂದೂಕು, ಪಿಸ್ತೂಲ್‌ ಹಾಗೂ ಮದ್ದುಗುಂಡುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ರೌಡಿ ಶೀಟರ್‌ ಸಮೀರ್‌ ಅಲಿಯಾಸ್‌ ಶೂಟರ್‌ ಸಮೀರ್‌ ಹಾಗೂ ಪಂಜಾಬ್‌ನ ಹರ್ಪಾಲ್‌ ಸಿಂಗ್‌ ಬಂಧಿತರು.

ಆರೋಪಿಗಳಿಂದ ಒಂದು ನಾಡ ಬಂದೂಕು, ಒಂದು ಪಿಸ್ತೂಲ್‌ ಹಾಗೂ ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

ಸಮೀರ್‌ಗೆ ಹರ್ಪಾಲ್‌ ಸಿಂಗ್‌ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ. ಕಡಿಮೆ ಬೆಲೆಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಸಮೀರ್ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ದೇವರಜೀವನಹಳ್ಳಿಯ ಸ್ವತಂತ್ರನಗರದ ಮುಖ್ಯರಸ್ತೆಯಲ್ಲಿ ಸಮೀರ್‌ನನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.

ಹರ್ಪಾಲ್‌ ಸಿಂಗ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.