ADVERTISEMENT

ಬಿಐಸಿ: ಇಂದು ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 22:19 IST
Last Updated 7 ಮಾರ್ಚ್ 2020, 22:19 IST

ಬೆಂಗಳೂರು: ವಿಶ್ವ ಮಹಿಳಾ ದಿನದ ಅಂಗವಾಗಿ ಮಾರ್ಚ್‌ 8 ರಂದು ಬೆಳಿಗ್ಗೆ10.30ರಿಂದ ರಾತ್ರಿ 9ರ ವರೆಗೆದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಕಾರ್ಯಕ್ರಮಗಳು ನಡೆಯಲಿವೆ.

ವಚನಗಳನ್ನು ಹಾಡುವ ಮೂಲಕಗಾಯಕಿ ಎಂ.ಡಿ.ಪಲ್ಲವಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿ‌ದ್ದಾರೆ. ‘ಪುರುಷನೂ ಅಳುತ್ತಾನೆ’, ‘20ನೇ ಶತಮಾನದಲ್ಲಿ ಭಾರತದ ಮುಸ್ಲಿಂ ಮಹಿಳೆಯರು’, ‘ನಮ್ಮ ನಡೆ ಸಮಾನತೆ ಕಡೆಗೆ’ ವಿಷಯ ಕುರಿತಂತೆ ತಜ್ಞರು ಚರ್ಚೆ ನಡೆಸಲಿದ್ದಾರೆ.

‘ಪುರುಷತ್ವ ವಿಷಯವೇ ಬಿಕ್ಕಟ್ಟಿನಲ್ಲಿದೆಯೇ’ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮಹಿಳೆಯರ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಲನಚಿತ್ರಗಳ ಪ್ರದರ್ಶನಗಳು ಇರಲಿವೆ. ಕಾವ್ಯವಾಚನ, ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ. ಉಚಿತ ಪ್ರವೇಶವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.