
ಬೆಂಗಳೂರು: ‘ಅಲೆನ್ ಬೆಂಗಳೂರು ಕೇಂದ್ರದ ಮೂವರು ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ 99.99 ಪರ್ಸೆಂಟೈಲ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ದಕ್ಷಿಣ ವಲಯದ, ವಲಯ ಮುಖ್ಯಸ್ಥ ಮಹೇಶ್ ಯಾದವ್ ತಿಳಿಸಿದ್ದಾರೆ.
ಸಾಥನ್ ಜೈಸ್ 99.99, ಸಿದ್ದಾರ್ಥ್ ರಾಮನಾಥ್ 99.99 ಹಾಗೂ ಹಾಗೂ ಶಿವ್ ಮೆಹ್ರಾ 99.99 ಪರ್ಸೆಂಟೈಲ್ ಪಡೆದಿದ್ದಾರೆ. ಇದಲ್ಲದೆ, ನಾಥನ್ ಜೈಸ್ ಭೌತ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ 100 ಪರ್ಸೆಂಟೈಲ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
‘ಸಮರ್ಪಕ ಮಾರ್ಗದರ್ಶನದ ಫಲವಾಗಿ ಕೇಂದ್ರದ 37 ವಿದ್ಯಾರ್ಥಿಗಳು 99.90 ಪರ್ಸೆಂಟೈಲ್ ಗಳಿಸಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಪ್ರೋತ್ಸಾಹ, ಶಿಕ್ಷಕರ ಶ್ರಮದ ಪ್ರತಿಫಲವಾಗಿದೆ’ ಎಂದು ಮಹೇಶ್ ಯಾದವ್ ಹೇಳಿದ್ದಾರೆ.
‘ಉನ್ನತ ಪರ್ಸೆಂಟೈಲ್‌ನೊಂದಿಗೆ ಜೆಇಇ ಮೇನ್ ಅರ್ಹತೆ ಪಡೆಯುವ ಕನಸು ನನಸಾದಂತಾಗಿದೆ. ಅಲೆನ್ ಸೇರಿದ ನಂತರ ನನ್ನ ಅಧ್ಯಯನ ಕ್ರಮಬದ್ಧವಾಯಿತು. ನಿಯಮಿತ ಪರೀಕ್ಷೆ ಮತ್ತು ವಿಶ್ಲೇಷಣಾತ್ಮಕ ಮೌಲ್ಯಮಾಪನ ನನ್ನ ವಿಷಯ ಜ್ಞಾನ ಹೆಚ್ಚಿಸಿತು’ ಎಂದು ವಿದ್ಯಾರ್ಥಿ ನಾಥನ್ ಜೈಸ್ ಅನುಭವ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.