ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ‘ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂಬ ಆರೋಪ ಸುಳ್ಳು ಮತ್ತು ವಾಸ್ತವಕ್ಕೆ ದೂರವಾಗಿದೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಚಿಕ್ಕಮಾರನಹಳ್ಳಿಯ ಡಾಲರ್ಸ್ ಕಾಲೊನಿಯ ಎಸ್‌ಬಿಐ ಶಾಖೆಯ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಿ ಸಿ.ಡಿ.ಬಿಂದು ಎಂಬುವವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ, ‘ಸಾಕ್ಷಿದಾರರು, ದೂರುದಾರರು ಮತ್ತು ಪೊಲೀಸರ ಸಮಕ್ಷಮದಲ್ಲಿ ಲಾಕರ್ ಪರಿಶೀಲಿಸಲಾಯಿತು. ಈ ವೇಳೆ ದೂರುದಾರರೇ ಲಾಕರ್ ಬೀಗ ತೆಗೆದಾಗ ಪರಿಶೀಲಿಸಿದಾಗ, ನಾಪತ್ತೆಯಾಗಿದ್ದವು ಎಂದು ಆರೋಪಿಸಿದ್ದ ಆಭರಣಗಳು ಅಲ್ಲಿಯೇ ಕಂಡುಬಂದಿವೆ’ ಎಂದು ಹೇಳಿದ್ದಾರೆ. ಈ ಎಲ್ಲಾ ಪ್ರಕ್ರಿಯೆಯನ್ನು ತನಿಖಾಧಿಕಾರಿಗಳು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.