ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎನ್.ಆರ್. ಕಾಲೊನಿಯಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡ ಹಾಗೂ ಆವರಣ ಕೆಂಪು–ಹಳದಿ ಬಣ್ಣಗಳಿಂದ ತುಂಬಿಹೋಗಿದೆ.
ಕೇಂದ್ರ ಕಚೇರಿಯ ಪ್ರಮುಖ ಕಟ್ಟಡಕ್ಕೆ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಕೆಂಪು–ಹಳದಿಯ ವಿದ್ಯುತ್ ದೀಪಗಳನ್ನೂ ಅಳವಡಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ತಯಾರಿ ಆರಂಭವಾಗಿ, ಸಂಜೆಯ ವೇಳೆಗೆ ದೀಪಗಳು ಝಗಮಗಿಸುತ್ತಿದ್ದವು.
ಅನೆಕ್ಸ್ ಕಟ್ಟಡಗಳಿಗೂ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಎಲ್ಲೆಡೆ ಕನ್ನಡಮಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಕಲ್ಲಿನ ಕಟ್ಟಡಗಳೆಲ್ಲವೂ ಕನ್ನಡ ಧ್ವಜವನ್ನು ಹೊದ್ದುಕೊಂಡು ಕಂಗೊಳಿಸುತ್ತಿವೆ. ಗೇಟ್‌ಗಳು ಹಾಗೂ ಗ್ರಿಲ್‌ಗಳಿಗೆ ಕನ್ನಡ ಧ್ವಜದ ಜೊತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ನವೆಂಬರ್ 6ರಂದು ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ಪುನೀತ್ ರಾಜ್‌ಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರಣದಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣವನ್ನು ಸಜ್ಜುಗೊಳಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ. ಅಮೃತ್‌ರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.