ADVERTISEMENT

ಕೆಐಎ ಕಾರ್ಗೊ: ವರ್ಷದಲ್ಲಿ ಶೇ 79 ಪ್ರಗತಿ

ಮೊದಲ ತ್ರೈಮಾಸಿಕದಲ್ಲಿ ಸರಕು–ಸಾಗಣೆ ಪ್ರಮಾಣ ಶೇ 15.3ರಷ್ಟು ವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 19:30 IST
Last Updated 13 ಆಗಸ್ಟ್ 2020, 19:30 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ (ಸಂಗ್ರಹ ಚಿತ್ರ)
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ (ಸಂಗ್ರಹ ಚಿತ್ರ)   

ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಸರಕು ಸಾಗಣೆ ಮಾರುಕಟ್ಟೆ (ಕಾರ್ಗೊ) ವಿವರವನ್ನು ಬಿಐಎಎಲ್‌ ಪ್ರಕಟಿಸಿದೆ. ಲಾಕ್‌ಡೌನ್‌ ನಡುವೆಯೂ ಸರಕು–ಸಾಗಣೆ ಮೊದಲ ತ್ರೈಮಾಸಿಕದಲ್ಲಿ ಶೇ 15.3ರಷ್ಟು ಪ್ರಗತಿಯಾಗಿದ್ದರೆ,ಸರಕು ಸಾಗಣೆ ವಿಮಾನಗಳ ಹಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 79ರಷ್ಟು ಏರಿಕೆ ಕಂಡುಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 11.2ರಷ್ಟು ಪ್ರಗತಿ ಸಾಧಿಸಲಾಗಿತ್ತು.ಬೇಗ ಹಾಳಾಗುವ ಉತ್ಪನ್ನಗಳಲ್ಲಿ 507 ಟನ್‌ಮಾವಿನಹಣ್ಣುಗಳನ್ನು 31 ದೇಶಗಳಿಗೆ ರಫ್ತು ಮಾಡಲಾಗಿದೆ. ಔಷಧಗಳ ಜತೆಗೆ ಎಲೆಕ್ಟ್ರಾನಿಕ್ ಮತ್ತು ಎಂಜಿನಿಯರಿಂಗ್ ಉಪಕರಣಗಳು, ಬಿಡಿಭಾಗಗಳು, ಸಿದ್ಧ ಉಡುಪುಗಳ ರಫ್ತಿನಲ್ಲೂ ಗಮನಾರ್ಹ ಏರಿಕೆಯಾಗಿದೆ.

ಕೋವಿಡ್‌ಗೂ ಮುನ್ನ ನಾಗರಿಕ ವಿಮಾನಗಳು ಮತ್ತು ಕಾರ್ಗೊ ವಿಮಾನಗಳ ಪ್ರಮಾಣ 60:40ರ ಅನುಪಾತದಲ್ಲಿತ್ತು. ಮಾರ್ಚ್‍ನಿಂದ ಈಚೆಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಲ್ದಾಣವು ಸಂಪೂರ್ಣ ಕಾರ್ಗೊಗೆಮೀಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಶೇ 40ರಷ್ಟು ನಾಗರಿಕ ವಿಮಾನಗಳನ್ನು ಕೂಡ ಸರಕು ಸಾಗಣೆಗೆ ಬಳಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.