ಕೆ.ಆರ್.ಪುರ: ಲೂರ್ದು ಮಾತೆ ಯುವಕರ ತಂಡ ಹಾಗೂ ಈಸ್ಟ್ ಪಾಯಿಂಟ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಬೃಹತ್ ಮಟ್ಟದ ಅರೋಗ್ಯ ಶಿಬಿರವನ್ನು ಶೀಗೆಹಳ್ಳಿ ಸಮೀಪದ ಲೂರ್ದುನಗರದಲ್ಲಿ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರದಲ್ಲಿ ಈಸ್ಟ್ ಪಾಯಿಂಟ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಹೃದಯ ಸಂಬಂಧಿ ಕಾಯಿಲೆ, ಕಣ್ಣಿನ ತಪಾಸಣೆ, ಇಸಿಜಿ, ಮಧುಮೇಹ, ಮೂಳೆ ಸಂಬಂಧಿತ ಕಾಯಿಲೆಯ ತಪಾಸಣೆ ನಡೆಸಿದರು.
ಲೂರ್ದು ಮಾತೆ ಚರ್ಚ್ ಗುರುಗಳಾದ ಸಿ.ವರ್ಗಿಸ್ ಮಾತನಾಡಿ, ‘ಪ್ರತಿಯೊಬ್ಬ ಮನಷ್ಯನಿಗೆ ಮುಖ್ಯವಾಗಿ ಬೇಕಿರುವುದು ಆರೋಗ್ಯ. ಆರೋಗ್ಯವಂತರಾಗಿ ಇದ್ದಾಗ ಮಾತ್ರ ಜೀವನದಲ್ಲಿ ಏನು ಬೇಕಿದ್ದರೂ ಸಾಧಿಸಬಹುದು’ ಎಂದರು.
ಯುವಕರ ತಂಡದ ಸದಸ್ಯ ಎಡ್ವಿನ್ ಮಾತನಾಡಿ, ‘ಯುವಕರ ತಂಡದಿಂದ ಆಯೋಜಿಸಿದ್ದ ಶಿಬಿರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. 54 ಯುನಿಟ್ ರಕ್ತ ಸಂಗ್ರಹವಾಗಿದ್ದು, ಅದನ್ನು ರಕ್ತ ಭಂಡಾರ ನಿಧಿಗೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.